ಭಗವಾನ್ ಶಿವ ಇಂದಿಗೂ ಕೈಲಾಸ ಪರ್ವತದಲ್ಲಿ ನೆಲೆಸಿದ್ದಾನೆ ಎಂಬ ನಂಬಿಕೆಯಿದೆ. ವಿಶೇಷ ಅಂದ್ರೆ ಕೈಲಾಸ ಪರ್ವತದಲ್ಲಿ ಶಿವನ ಢಮರುಗದ ಸದ್ದು ಕೇಳಿಸುತ್ತದೆ. ಕೈಲಾಸ ಪರ್ವತದ ಬಗ್ಗೆ ಇರುವ ಅನೇಕ ನಿಗೂಢ ಕಥೆಗಳಲ್ಲಿ ಇದೂ ಒಂದು. ಶಿವನ ಇಡೀ ಕುಟುಂಬವು ಕೈಲಾಸ ಪರ್ವತದಲ್ಲಿ ನೆಲೆಸಿದೆ ಎಂದು ಹಲವರು ನಂಬುತ್ತಾರೆ. ಇದಕ್ಕೆ ಕಾರಣ ಇದುವರೆಗೂ ಯಾವುದೇ ಪರ್ವತಾರೋಹಿಯಿಂದ ಕೈಲಾಸ ಪರ್ವತವನ್ನು ಏರಲು ಸಾಧ್ಯವಾಗಿಲ್ಲ. ಅನೇಕ ಪರ್ವತಾರೋಹಿಗಳು ಕೈಲಾಸ ಪರ್ವತವನ್ನು ಏರಲು ಪ್ರಯತ್ನಿಸಿ ವಿಫಲರಾಗಿದ್ದಾರೆ.
ಹಿಂದೂ ಧರ್ಮದಲ್ಲಿ ಪವಿತ್ರವೆಂದು ಪರಿಗಣಿಸಲಾದ ಕೈಲಾಸ ಪರ್ವತಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳಿವೆ. ಈ ರಹಸ್ಯಗಳಲ್ಲಿ ಒಂದು ಕೈಲಾಸ ಪರ್ವತದಿಂದ ಬರುವ ನಿಗೂಢ ಧ್ವನಿ. ಕೈಲಾಸ ಪರ್ವತವನ್ನು ಸುತ್ತಿದ ಜನರು ಇಲ್ಲಿ ನಿಗೂಢ ಶಬ್ದ ಬರುತ್ತದೆ ಎಂದು ಹೇಳುತ್ತಾರೆ. ಈಲ್ಲಿ ನಿರಂತರವಾಗಿ ಢಮರುಗದ ಶಬ್ಧ ಕೇಳುತ್ತಲೇ ಇರುತ್ತದೆ ಎನ್ನುತ್ತಾರೆ. ಇದು ಭಗವಾನ್ ಭೋಲೆನಾಥನು ಢಮರುಗ ನುಡಿಸುವ ಶಬ್ಧ ಎನ್ನುವುದು ಭಕ್ತರ ನಂಬಿಕೆ. ಕೈಲಾಸ ಪರ್ವತದಿಂದ ʼಓಂʼ ಶಬ್ದವು ನಿರಂತರವಾಗಿ ಬರುತ್ತದೆ ಎಂದು ಹಲವರು ನಂಬುತ್ತಾರೆ.
ಪರ್ವತಗಳ ಮೇಲೆ ಹಿಮವು ಸಂಗ್ರಹವಾದಾಗ ಮತ್ತು ಗಾಳಿಯು ಈ ಹಿಮದೊಂದಿಗೆ ಡಿಕ್ಕಿ ಹೊಡೆದಾಗ, ಶಬ್ದವು ಉತ್ಪತ್ತಿಯಾಗುತ್ತದೆ ಎಂಬ ವಾದವೂ ಇದೆ. ಈ ಶಬ್ದದಿಂದ ಹೊರಹೊಮ್ಮುವ ಪ್ರತಿಧ್ವನಿ ಓಂ ರೂಪದಲ್ಲಿ ಕೇಳಿಸುತ್ತದೆ ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ ಅಲೌಕಿಕ ಶಕ್ತಿಗಳು ಕೈಲಾಸ ಪರ್ವತದಲ್ಲಿ ನೆಲೆಸಿವೆ. ಅನೇಕ ದೇವರುಗಳು ಇರುವುದರಿಂದ ಕೈಲಾಸ ಪರ್ವತವನ್ನು ಸ್ವರ್ಗದ ದ್ವಾರವೆಂದು ಪರಿಗಣಿಸಲಾಗಿದೆ.
ಇಂದಿಗೂ ಶಿವನು ಕೈಲಾಸ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದಾನೆ ಎನ್ನಲಾಗುತ್ತದೆ. ಹಿಂದೂ ಧರ್ಮದ ಹೊರತಾಗಿ, ಬೌದ್ಧ ಮತ್ತು ಜೈನ ಧರ್ಮದವರಿಗೂ ಕೈಲಾಸ ಪರ್ವತವು ತುಂಬಾ ವಿಶೇಷವಾಗಿದೆ. ಬೌದ್ಧ ಧರ್ಮದ ಅನುಯಾಯಿಗಳು ಕೈಲಾಸ ಪರ್ವತವನ್ನು ಭಗವಾನ್ ಬುದ್ಧನ ವಾಸಸ್ಥಾನವೆಂದು ಪರಿಗಣಿಸುತ್ತಾರೆ. ಜೈನ ಧರ್ಮೀಯರು ಕೂಡ ಕೈಲಾಸ ಪರ್ವತವನ್ನು ಅತ್ಯಂತ ಪವಿತ್ರ ಸ್ಥಳವೆಂದು ಪರಿಗಣಿಸುತ್ತಾರೆ.