
ರಂಜಿತ್ ಸಿಂಗ್ ನಿರ್ದೇಶನದ ‘supplier ಶಂಕರ’ ಚಿತ್ರದ ಮೇಕಿಂಗ್ ವಿಡಿಯೋ ಒಂದನ್ನು ಇತ್ತೀಚಿಗೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಚಿತ್ರತಂಡ ನಾಳೆ ಮೋಶನ್ ಪೋಸ್ಟರ್ ರಿಲೀಸ್ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
ಆಕ್ಷನ್ ಡ್ರಾಮಾ ಲವ್ ಸ್ಟೋರಿ ಕಥಾಧಾರಿತ ಈ ಚಿತ್ರಕ್ಕೆ ತ್ರಿನೇತ್ರ ಫಿಲಂಸ್ ಬ್ಯಾನರ್‌ನಡಿ ಎಂ ಸಿ ಚಂದ್ರಶೇಖರ್ ಬಂಡವಾಳ ಹೂಡಿದ್ದು, ನಿಶ್ಚಿತ್ ಕೊರೋಡಿ ಹಾಗೂ ದೀಪಿಕಾ ಆರಾಧ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್ ಬಿ ಭರತ್ ಸಂಗೀತ ಸಂಯೋಜನೆ ನೀಡಿದ್ದಾರೆ. ಡಬ್ಬಿಂಗ್ ಕಾರ್ಯವನ್ನು ಮುಗಿಸಿರುವ ಚಿತ್ರ ತಂಡ ಶೀಘ್ರದಲ್ಲೇ ಸಿನಿಮಾ ತೆರೆ ಮೇಲೆ ತರುವ ನಿರೀಕ್ಷೆಯಲ್ಲಿದೆ.
