ರೂಪೇಶ್ ಶೆಟ್ಟಿ ಮತ್ತು ಜಾನ್ವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಅಧಿಪತ್ರ’ ಚಿತ್ರದ ‘ಆಟಿ ಕಳಂಜ’ ಎಂಬ ಲಿರಿಕಲ್ ಹಾಡು ಇಂದು ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಚಯನ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ರೂಪೇಶ್ ಶೆಟ್ಟಿ ಮತ್ತು ಜಾನ್ವಿ ಸೇರಿದಂತೆ ರಘು ಪಾಂಡೇಶ್ವರ್, ಎಂಕೆ ಮಾತಾ, ಪ್ರಕಾಶ್ ತೂಮಿನಾಡು, ದೀಪಕ್ ರೈ, ಕಾರ್ತಿಕ್ ರಾವ್, ನಟನಾ ಪ್ರಶಾಂತ್, ಪ್ರದೀಪ್, ಪ್ರಭಾಕರ್ ಕುಂದರ್ ವಿದ್ಯಾ, ಬಣ್ಣ ಹಚ್ಚಿದ್ದು, ಕೆ ಆರ್ ಸಿನಿ COMBINES ಬ್ಯಾನರ್ ನಲ್ಲಿ ದಿವ್ಯನಾರಾಯಣ್ ಕುಲದೀಪ್ ರಾಘವ್ ಹಾಗೂ ಲಕ್ಷ್ಮಿ ಗೌಡ ನಿರ್ಮಾಣ ಮಾಡಿದ್ದಾರೆ. ಶ್ರೀಹರಿ ಶ್ರೆಸ್ಟಿ ಮ್ಯೂಸಿಕ್ ಕಂಪೋಸ್ ಮಾಡಿದ್ದು, ರಾಹುಲ್, ಶ್ರೀಕಾಂತ್ ಸಂಕಲನ, ಚಯನ್ ಶೆಟ್ಟಿ ಸಂಭಾಷಣೆ, ಹಾಗೂ ಶ್ರೀಕಾಂತ್ ಅವರ ಛಾಯಾಗ್ರಹಣವಿದೆ.