
ದೇವರಾಜ್ ಪೂಜಾರಿ ನಿರ್ದೇಶನದ ಪೃಥ್ವಿ ಅಂಬಾರ್ ಅಭಿನಯದ ‘ಮತ್ಸ್ಯಗಂಧ’ ಚಿತ್ರದ ”ಭಾಗೀರಥಿ” ಎಂಬ ಐಟಂ ಹಾಡು ನಾಳೆ a2 ಮ್ಯೂಸಿಕ್ ಅಫೀಷಿಯಲ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.
ವಿಶ್ವನಾಥ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಸೇರಿದಂತೆ ದಿಶಾ ಶೆಟ್ಟಿ, ಭಜರಂಗಿ ಲೋಕಿ, ಶರತ್ ಲೋಹಿತಾಶ್ವ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಅಶೋಕ್ ಹೆಗಡೆ, ಸತೀಶ್ ಚಂದ್ರ, ಕಾಂತರಾಜ್ ಕಡ್ಡಿಪುಡಿ, ತೆರೆ ಹಂಚಿಕೊಂಡಿದ್ದು, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜನೆ ನೀಡಿದ್ದಾರೆ.
