ಬೆಂಗಳೂರು : ರಾಜ್ಯದ ರೈತರಿಗೆ ಸರ್ಕಾರ ನೀರಿಲ್ಲದೆ ಭತ್ತ ಬೆಳೆಯುವ ಭಾಗ್ಯ ನೀಡಿದೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.
ಟ್ವೀಟ್ ಮಾಡಿದ ಬಿಜೆಪಿ ‘ ಸ್ಟಾಲಿನ್ ನಾಡಿನ ರೈತರಿಗೆ ಎರೆಡೆರಡು ಬೆಳೆ ಬೆಳೆಯಲು ನೀರು ಬಿಟ್ಟು, ನಾಡಿನ ರೈತರಿಗೆ ನೀರಿಲ್ಲದೆ ಭತ್ತ ಬೆಳೆಯುವ “ಕರ್ನಾಟಕ ಮಾಡೆಲ್” ಅನ್ನು ಪರಿಚಯಿಸುತ್ತಿರುವ ನಾಡದ್ರೋಹಿ ಕಾಂಗ್ರೆಸ್ ಸರ್ಕಾರ’ ಎಂದು ಕಿಡಿಕಾರಿದೆ.
ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು – ಇದು ಹಳೇ ಗಾದೆ… ಊರ್ ಕೊಳ್ಳೆ ಹೊಡ್ಸಿದ್ರು, ಆಮೇಲೆ ಕೋಟೆ ಬಾಗ್ಲು ಹಾಕೋ ನಾಟಕ ಆಡ್ಸಿದ್ರು – ಇದು ಇವ್ರನ್ನು ನೋಡಿ ಮಾಡಿರೋ ಹೊಸ ಗಾದೆ…ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಿರುವ ಕಾಂಗ್ರೆಸ್ ತುಘಲಕ್ ಸರ್ಕಾರ ಮುಂದೆ ಜನರಿಗೆ ಷರತ್ತುಗಳೊಂದಿಗೆ ಹೊರಡಿಸಬಹುದಾದ ಆದೇಶಗಳು..! ಕಾವೇರಿ ನೀರಿಲ್ಲ ರೈತರು ಬೆಳೆ ಬೆಳೆಯಬೇಡಿ..! ಬೆಂಗಳೂರಿಗೆ ನೀರಿಲ್ಲ ಸ್ನಾನ ಮಾಡಬೇಡಿ, ಸೆಂಟ್ ಬಳಸಿ..! ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆ ಫ್ರಿಜ್ ಟಿವಿ ಬಳಸಬೇಡಿ..! ಬರಗಾಲದಿಂದ ಆಹಾರದ ಕೊರತೆ ಇದೆ ಉಪವಾಸ ಮಾಡಿ..! ಸರ್ಕಾರದ ಬೊಕ್ಕಸ ಖಾಲಿ ಆಗಿದೆ ವಿಸ್ಕಿ, ರಮ್ ಕುಡಿಯಿರಿ..! ಇದು ತಮಾಷೆ ಅಲ್ಲ, ಈಗಾಗಲೇ ಇದರಲ್ಲಿ ಮೂರು ಅಂಶಗಳು ಪ್ರಸ್ತುತ ಚಾಲ್ತಿಗೆ ಬಂದಿವೆ. ಇನ್ನು ಹತ್ತು ಹಲವುಗಳನ್ನು ಕಾಂಗ್ರೆಸ್ ತರಲಿದೆ ಎಂದು ವಾಗ್ಧಾಳಿ ನಡೆಸಿದೆ.