ಶಾರುಖ್ ಖಾನ್ ಬಾಲಿವುಡ್‌ನ ಬಾದ್‌ಶಾ ಎಂದೇ ಫೇಮಸ್. ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ಈ 3 ದಶಕಗಳಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ ಕಿಂಗ್ ಖಾನ್. ಅವರಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.
ಆದರೆ ಶಾರುಖ್‌ರ ಅತ್ಯಂತ ಕೆಟ್ಟ ಚಿತ್ರದ ಬಗ್ಗೆ ಅನೇಕರಿಗೆ ತಿಳಿದಿಲ್ಲ ಈ ಸಿನೆಮಾ 10 ವರ್ಷಗಳ ಕಾಲ ಬಿಡುಗಡೆಗೆ ಕಾಯುತ್ತಿತ್ತು. 1994ರಲ್ಲಿ ಈ ಚಿತ್ರ ಸಿದ್ಧವಾಗಿತ್ತು. ದಶಕದ ನಂತರ 2004 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಈ ಸಿನೆಮಾದ ಹೆಸರು ‘ಯೇ ಲಮ್ಹೆ ಜುದಾಯಿ ಕೆ’. 10 ರಲ್ಲಿ ಕೇವಲ 3.1 ರೇಟಿಂಗ್ ಪಡೆದ ಚಿತ್ರವಿದು. ಬೀರೇಂದ್ರ ನಾಥ್ ತಿವಾರಿ ಈ ಚಿತ್ರವನ್ನು ನಿರ್ದೇಶಿಸಿದ್ದರು. ಶಾರುಖ್ ಖಾನ್, ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ರವೀನಾ ಟಂಡನ್ ನಡುವೆ ಚುಂಬನದ ದೃಶ್ಯ ಇರಬೇಕೆಂದು ನಿರ್ದೇಶಕರು ಬಯಸಿದ್ದರು. ಆದರೆ ಶಾರುಖ್ ಹಾಗೂ ರವೀನಾಗೆ ಕಿಸ್ಸಿಂಗ್ ದೃಶ್ಯದಲ್ಲಿ ನಟಿಸಲು ಇಷ್ಟವಿರಲಿಲ್ಲ. ಈ ಚುಂಬನದ ದೃಶ್ಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಮುಂದುವರಿದಿತ್ತು. ಸಾಕಷ್ಟು ಪ್ರಯತ್ನ ಮಾಡಿದರೂ ಶಾರುಖ್ ಖಾನ್ ಒಪ್ಪದಿದ್ದಾಗ ನಿರ್ದೇಶಕರು 2003ರಲ್ಲಿ ಮತ್ತೆ ಸಿನಿಮಾ ಆರಂಭಿಸಿದರು. ಶಾರುಖ್ ಈ ಚಿತ್ರದ ಪ್ರಮೋಶನ್‌ಗೂ ಬರಲಿಲ್ಲ. ಸಾಕಷ್ಟು ಕಸರತ್ತಿನ ಬಳಿಕ 2004ರಲ್ಲಿ ಸಿನೆಮಾ ರಿಲೀಸ್ ಆಗಿತ್ತು.