![ಕಿರಿಕ್ ಹುಡುಗಿಯ 'ಕ್ರೀಂ' ಚಿತ್ರದ ಟ್ರೈಲರ್ ರಿಲೀಸ್](https://i0.wp.com/publictv.in/wp-content/uploads/2024/01/Cream-3.jpg?resize=800%2C450&ssl=1)
ಮಾರ್ಚ್ ಒಂದರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಸಂಯುಕ್ತ ಹೆಗಡೆ ಅಭಿನಯದ ‘ಕ್ರೀಮ್’ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದರ ಡೈಲಾಗ್ ಟ್ರೈಲರ್ ನಾಳೆ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಅಗ್ನಿ ಶ್ರೀಧರ್ ನಿರ್ದೇಶನದ ಈ ಚಿತ್ರವನ್ನು ಸಂವರ್ಧಿನಿ ಪ್ರೊಡಕ್ಷನ್ ಬ್ಯಾನರ್ ನಡಿ ಡಿ ಕೆ ದೇವೇಂದ್ರ ನಿರ್ಮಾಣ ಮಾಡಿದ್ದು, ಸಂಯುಕ್ತ ಹೆಗಡೆ ಸೇರಿದಂತೆ ಅಗ್ನಿ ಶ್ರೀಧರ್, ಅಚ್ಯುತ್ ಕುಮಾರ್, ಅರುಣ್ ಸಾಗರ್, ರೋಷನ್ ಬಣ್ಣ ಹಚ್ಚಿದ್ದಾರೆ. ಆರ್ಯನ್ ಗೌಡ ಸಂಕಲನ, ಸುನೋಜ್ ಛಾಯಾಗ್ರಹಣವಿದೆ. ರೋಹಿತ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಸಂಯುಕ್ತ ಹೆಗಡೆ ವೇಶ್ಯೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.
![](https://kannadadunia.com/wp-content/uploads/2024/02/0054f09c-b16d-4eb9-8b59-dc609fb956fd-400x442.jpg)