ಸಾಮಾಜಿಕ ಮಾಧ್ಯಮದ ನೆಚ್ಚಿನ ನಾಗಾಲ್ಯಾಂಡ್ ರಾಜಕಾರಣಿ ಟೆಮ್ಜೆನ್ ಇಮ್ನಾ ಅಲೋಂಗ್ ಆಗಾಗ್ಗೆ ಹಲವಾರು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಇದೀಗ ಅಂತರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ, ಅಲಾಂಗ್ ಅವರು ತಮ್ಮ ತಾಯಿಯನ್ನು ಮ್ಯಾಜಿಕ್ ಮಹಿಳೆ ಎಂದು ವ್ಯಾಖ್ಯಾನಿಸಿದ್ದು, ಅವರಿಗೆ ಶುಭ ಹಾರೈಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಅವರು ತಮ್ಮ ತಾಯಿಯ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರು ಹೇಗಿದ್ದಾರೆಂದು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ‘ಅವಳು ಸೃಷ್ಟಿಕರ್ತ. ಅವಳು ಮ್ಯಾಜಿಕ್’ ಎಂದು ಟೆಮ್ಜೆನ್ ಬರೆದುಕೊಂಡಿದ್ದಾರೆ. ನಂತರ ಪ್ರತಿಯೊಬ್ಬ ಮಹಿಳೆಯರಿಗೆ ಅಂತರರಾಷ್ಟ್ರೀಯ ಮಹಿಳಾ ದಿನ 2023 ಶುಭಾಶಯಗಳು ಎಂದಿದ್ದಾರೆ. ಇವರಿಗೆ ತಾಯಿಯ ಮೇಲಿರುವ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
https://twitter.com/AlongImna/status/1633314696202973184?ref_src=twsrc%5Etfw%7Ctwcamp%5Etweetembed%7Ctwterm%5E1633314696202973184%7Ctwgr%5Eea34beee68232f843cacbb2f913e135cf892a98f%7Ctwcon%5Es1_&ref_url=https%3A%2F%2Fwww.ndtv.com%2Foffbeat%2Finternational-womens-day-the-creator-nagalands-temjen-imna-along-shares-heartfelt-post-for-mother-3843333