ರೋಗ ನಿರೋಧಕ ಶಕ್ತಿ ಸುಧಾರಿಸಿ ಆರೋಗ್ಯಕರ ಜೀವನ ನೀಡುತ್ತೆ ಮುಕ್ತ ನಗು

ಉತ್ತಮ ಆಹಾರ, ವ್ಯಾಯಾಮದ ಜೊತೆ ಮನಸ್ಸು ಖುಷಿಯಾಗಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ಆರೋಗ್ಯಕರ ಜೀವನಕ್ಕೆ ನಗು ಬಹಳ ಮುಖ್ಯ.

ಒತ್ತಡದಲ್ಲಿದ್ದಾಗ ದೇಹವು ಕಾರ್ಟಿಸೋಲ್ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಕಾರ್ಟಿಸೋಲ್ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ದೇಹದಿಂದ ಎಂಡಾರ್ಫಿನ್ ಹೊರ ಬರಬೇಕು. ವಿಶೇಷವೆಂದರೆ ನಗುವುದರ ಮೂಲಕ ಸುಲಭವಾಗಿ ಎಂಡಾರ್ಫಿನ್ ಹೊರ ಹಾಕಬಹುದು.

ನಗು ಆಂತರಿಕ ವ್ಯಾಯಾಮಕ್ಕೆ ಹೆಚ್ಚು ಪ್ರಯೋಜನಕಾರಿ. ದೊಡ್ಡದಾಗಿ ನಗುವುದ್ರಿಂದ ಹೊಟ್ಟೆ, ಉಸಿರಾಟದ ವ್ಯವಸ್ಥೆ ಮತ್ತು ಭುಜಗಳ ವ್ಯಾಯಾಮಕ್ಕೆ ಕಾರಣವಾಗುತ್ತದೆ. ನಗುವಿನ ನಂತರ ಸ್ನಾಯುಗಳು ಹೆಚ್ಚು ಶಾಂತವಾಗುತ್ತವೆ.

ನಗುವಿನಿಂದ ದೇಹದಲ್ಲಿ ಹೆಚ್ಚು ಮೆಲಟೋನಿನ್ ಉತ್ಪತ್ತಿಯಾಗುತ್ತದೆ. ಇದು ಮೆದುಳಿನಿಂದ ಬಿಡುಗಡೆಯಾಗುವ ಹಾರ್ಮೋನ್. ಇದು ಉತ್ತಮ ನಿದ್ರೆಗೆ ಸಹಕಾರಿ. ಖಿನ್ನತೆಯೊಂದಿಗೆ ಹೋರಾಡಲು ಇದು ನೆರವಾಗುತ್ತದೆ.

ಮುಕ್ತ ನಗು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ನಗು ರಕ್ತದಲ್ಲಿನ ಟಿ-ಕೋಶಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಸೋಂಕು ನಿರೋಧಕ ಪ್ರತಿಕಾಯಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿದಿನ ಹೆಚ್ಚೆಚ್ಚು ನಗು ಆರೋಗ್ಯ ವೃದ್ಧಿಗೆ ಸಹಕಾರಿ. ಬಿಪಿ, ಮಧುಮೇಹವನ್ನು ನಿಯಂತ್ರಿಸುವ ಶಕ್ತಿ ನಗುವಿಗಿದೆ. ಅಲ್ಲದೆ ವಯಸ್ಸು ಕಡಿಮೆಯಾದಂತೆ ಕಾಣಲು ಬಯಸುವವರು ಮನಸ್ಸು ಬಿಚ್ಚಿ ನಗಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read