
ಬರೋಬ್ಬರಿ 160 ಕೆಜಿ ತೂಕದ ಅಸ್ವಸ್ಥ ಮಹಿಳೆಯು ಹಾಸಿಗೆಯಿಂದ ಬಿದ್ದಿದ್ದು ಈಕೆಯನ್ನು ಮೇಲಕ್ಕೆತ್ತಲು ಆಕೆಯ ಕುಟುಂಬವು ಅಗ್ನಿಶಾಮಕ ದಳದ ಸಹಾಯ ಕೋರಿದ ಘಟನೆಯು ಮಹಾರಾಷ್ಟ್ರದ ಥಾಣೆಯಲ್ಲಿ ಸಂಭವಿಸಿದೆ.
62 ವರ್ಷದ ವೃದ್ಧೆ ನಡೆದಾಡಲಾಗದೇ ಕಷ್ಟ ಪಡುತ್ತಿದ್ದರು. ಹಾಸಿಗೆಯ ಮೇಲೆಯೇ ಇರುತ್ತಿದ್ದ ಮಹಿಳೆಯು ಬೆಳಗ್ಗೆ 8 ಗಂಟೆ ಸುಮಾರಿಗೆ ಹಾಸಿಗೆಯಿಂದ ಆಕಸ್ಮಿಕವಾಗಿ ಬಿದ್ದಿದ್ದರು ಎನ್ನಲಾಗಿದೆ.
ಹಾಸಿಗೆಯಿಂದ ಕೆಳಗೆ ಬಿದ್ದಿದ್ದ ವೃದ್ಧೆಯನ್ನು ಮೇಲಕ್ಕೆತ್ತಲು ಕುಟುಂಬಸ್ಥರಿಗೆ ಸಾಧ್ಯವಾಗಿಲ್ಲ ಎಂದು ಥಾಣೆ ಮುನ್ಸಿಪಲ್ ಕಾರ್ಪೋರೇಷನ್ ಮಾಹಿತಿ ನೀಡಿದೆ. ಅದೃಷ್ಟವಶಾತ್ 62 ವರ್ಷದ ವೃದ್ಧೆಗೆ ಯಾವುದೇ ಗಾಯಗಳಾಗಿಲ್ಲ.
ಥಾಣೆಯ ಆರ್ಡಿಎಂಸಿ ಮುಖ್ಯಸ್ಥ ಯಾಸಿನ್ ತಾಡ್ವಿ ಈ ವಿಚಾರವಾಗಿ ಮಾತನಾಡಿದ್ದು, 62 ವರ್ಷದ ಮಹಿಳೆಯು ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಳಗ್ಗೆ 8 ಗಂಟೆ ಸುಮಾರಿಗೆ ಇವರು ಹಾಸಿಗೆಯಿಂದ ಆಕಸ್ಮಿಕವಾಗಿ ಬಿದ್ದಿದ್ದಾರೆ. ಆದರೆ ಅವರ ತೂಕದ ಕಾರಣದಿಂದಾಗಿ ಕುಟುಂಬಸ್ಥರಿಗೆ ಅವರನ್ನು ಮೇಲಕೆತ್ತಲು ಸಾಧ್ಯವಾಗಿಲ್ಲ. ಕೂಡಲೇ ಕುಟುಂಬಸ್ಥರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಫ್ಲಾಟ್ಗೆ ಆಗಮಿಸಿ ವೃದ್ಧೆಯನ್ನು ಹಾಸಿಗೆ ಮೇಲೆ ಕುಳ್ಳಿರಿಸಿದೆ. ವೃದ್ಧೆಗೆ ಯಾವುದೇ ರೀತಿಯ ಏಟಾಗಿಲ್ಲ ಎಂದು ಹೇಳಿದ್ದಾರೆ.
