ಅಲ್ಪದರಿಂದ ಶಾರ್ಕ್​ ದಾಳಿಯಿಂದ ತಪ್ಪಿಸಿಕೊಂಡ ಸ್ಕೂಬಾ ಡೈವರ್​: ವಿಡಿಯೋ ವೈರಲ್​

ಸ್ಕೂಬಾ ಡೈವಿಂಗ್​ ಹೆಚ್ಚಿನ ಸಂದರ್ಭಗಳಲ್ಲಿ ಅಪಾಯಕಾರಿಯೇ ಆಗಿರುತ್ತದೆ. ಎಷ್ಟೋ ವೇಳೆ ನೀರ ಒಳಗಿರುವ ಅಪಾಯಕಾರಿ ಜಲಚರಗಳಿಗೆ ಮುಖಾಮುಖಿಯಾಗುವ ಸಂದರ್ಭಗಳು ಬಂದೊದಗಬಹುದು. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ.

ಸ್ಕೂಬಾ ಡೈವಿಂಗ್​ ಮಾಡುತ್ತಿರುವ ವ್ಯಕ್ತಿಗೆ ಶಾರ್ಕ್​ ಒಂದು ಮುಖಾಮುಖಿಯಾಗಿರುವ ಭಯಾನಕ ವಿಡಿಯೋ ಇದಾಗಿದೆ. ಡೈವಿಂಗ್​ ಮಾಡುತ್ತಿದ್ದ ವೇಳೆ ವ್ಯಕ್ತಿಯ ತಲೆಯ ಮೇಲೆ ಶಾರ್ಕ್​ ಹೊಡೆದಿರುವುದನ್ನು ನೋಡಬಹುದು. ಇದೊಂದು ಭಯಾನಕ ಎನ್​ಕೌಂಟರ್​ ಎನ್ನಲಾಗಿದೆ.

ಸ್ಕೂಬಾ ಡೈವರ್​ ತನ್ನ ತಲೆಯ ಮೇಲೆ ಕಚ್ಚಲು ಬಂದ ದೊಡ್ಡ ಬಿಳಿ ಶಾರ್ಕ್ ದಾಳಿಯಿಂದ ಸಾವಿನಿಂದ ಪಾರಾಗಲು ಅದೃಷ್ಟಶಾಲಿಯಾಗಿದ್ದಾನೆ. ನೀರಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿಲ್ಲವಾದ್ದರಿಂದ ಶಾರ್ಕ್​ ಬಂದಿರುವುದು ಆತನಿಗೆ ತಿಳಿಯಲಿಲ್ಲ. ಈ ವಿಡಿಯೋ ಇದುವರೆಗೆ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 2017ರಲ್ಲಿ ನಡೆದಿರುವ ಘಟನೆ ಇದು ಎನ್ನಲಾಗಿದ್ದು, ಇದೀಗ ಮತ್ತೊಮ್ಮೆ ವೈರಲ್​ ಆಗಿದೆ.

https://twitter.com/OTerrifying/status/1618467169830064129?ref_src=twsrc%5Etfw%7Ctwcamp%5Etweetembed%7Ctwte

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read