ಮಹಾರಾಷ್ಟ್ರ : ಮಹಾರಾಷ್ಟ್ರದ ಬಾಂಬ್ ಫ್ಯಾಕ್ಟರಿಯಲ್ಲಿ ಸ್ಪೋಟ ಸಂಭವಿಸಿದ್ದು, 9 ಮಂದಿ ಕಾರ್ಮಿಕರು ದುರ್ಮರಣಕ್ಕೀಡಾಗಿದ್ದಾರೆ.
ಮಹಾರಾಷ್ಟ್ರದ ನಾಗ್ಪುರದಲ್ಲಿ ಭಾನುವಾರ ಸಂಭವಿಸಿದ ಕಾರ್ಖಾನೆ ಸ್ಫೋಟದಲ್ಲಿ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಜನರು ಗಾಯಗೊಂಡಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳ ನಂತರ, ಮೃತರ ಕುಟುಂಬಗಳು ಮೃತ ದೇಹಗಳನ್ನು ನೋಡಲು ಕಾಯುತ್ತಿದ್ದರು. ಅವರಿಗೆ ಆವರಣದೊಳಗೆ ಪ್ರವೇಶಿಸಲು ಸಹ ಅವಕಾಶವಿರಲಿಲ್ಲ. ಇದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಯಿತು, ಸ್ಫೋಟ ಪೀಡಿತ ಕಾರ್ಖಾನೆಗೆ ಪ್ರವೇಶಿಸಲು 200 ಕ್ಕೂ ಹೆಚ್ಚು ಸ್ಥಳೀಯರು ಪ್ರತಿಭಟನೆ ನಡೆಸಿದರು. ಅಪಘಾತದ ನಂತರ, ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿತು.
ನಾಗುರದ ಬಜಾರ್ಗಾಂವ್ ಗ್ರಾಮದಲ್ಲಿರುವ ಸೋಲಾರ್ ಕಂಪನಿಯ ಬೂಸ್ಟರ್ ಘಟಕದಲ್ಲಿ ಉತ್ಪನ್ನವೊಂದನ್ನು ಸೀಲ್ ಮಾಡುತ್ತಿರುವಾಗ ಭಾನುವಾರ ಇದ್ದಕ್ಕಿದ್ದಂತೆ ಭಾರೀ ಸ್ಫೋಟ ಸಂಭವಿಸಿದೆ. ಆದರೆ ಸ್ಫೋಟಕ್ಕೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಘಟನೆ ನಡೆದ ವೇಳೆ ಸ್ಥಳದಲ್ಲಿ 12 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.