ಬೆಂಗಳೂರು: ರಾಜ್ಯದ ಆಯ್ದ ದೇವಾಲಯಗಳಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೆ ತರುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಚಿಂತನೆ ನಡೆಸಿದೆ.
ವಸ್ತ್ರ ಸಂಹಿತೆ ಜಾರಿಗೆ ತರುವ ಸಂಬಂಧ ಆಗಮ ಪಂಡಿತರ ಸಲಹೆ ಪಡೆಯಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ದೇವಾಲಯಗಳಿಗೆ ಬರುವ ಭಕ್ತರು ಸಭ್ಯ ಉಡುಪು ಧರಿಸಿದರೆ ಇಡೀ ಆವರಣದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಹೀಗಾಗಿ ಮಹಿಳೆಯರು, ಯುವತಿಯರು ಸೀರೆ, ಚೂಡಿದಾರ್ ನಂತಹ ಉಡುಪು ಧರಿಸಿದರೆ ಪುರುಷರು ಪ್ಯಾಂಟು, ಶರ್ಟು, ಪಂಚೆ ಧೋತಿ ಧರಿಸಿ ಬರಬಹುದು. ಇದರಿಂದ ದೇವಾಲಯಗಳಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಲಾಗಿದೆ.