![](https://kannadadunia.com/wp-content/uploads/2021/01/winter-cold-wave.jpg)
ಬೆಂಗಳೂರು : ರಾಜ್ಯದಲ್ಲಿ ತಾಪಮಾನ ಇಳಿಕೆಯಾಗಿದ್ದು, ಕಳೆದ ನಾಲ್ಕೈದು ದಿನಗಳಿಂದ ಮೈನಡುಗುವ ಚಳಿಗೆ ರಾಜ್ಯದ ಜನರು ತತ್ತರಿಸಿದ್ದಾರೆ.
ಈ ಬಾರಿ ವಿಜಯಪುರದಲ್ಲಿಡಿ. 15ರಂದು 9.6 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಇದು ಈ ವರ್ಷದ ರಾಜ್ಯದಲ್ಲಿ ಅತಿ ಕನಿಷ್ಠ ತಾಪಮಾನವಾಗಿದೆ. ನಿನ್ನೆ ವಿಜಯಪುರದಲ್ಲಿ 10.5 ಡಿಗ್ರಿ ತಾಪಮಾನ ದಾಖಲಾಗಿತ್ತು. ಚಿಕ್ಕಮಗಳೂರು, ಹಾಸನದಲ್ಲಿ 13.2, ಬೆಳಗಾವಿ, ಬೀದರ್ ಗಳಲ್ಲಿ 13.6, ಧಾರವಾಡದಲ್ಲಿ 14.4 ಡಿಗ್ರಿ ಬಾಗಲಕೋಟೆಯಲ್ಲಿ 14.5 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗಿದೆ.
ಚಳಿಯ ಪರಿಣಾಮ ವೃದ್ಧರಿಗೆ, ಮಕ್ಕಳಿಗೆ ಶೀತ ಜ್ವರ, ಕೆಮ್ಮು ಕಾಣಿಸುತ್ತಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.