
ಈ ರೀತಿಯ ಸಂದರ್ಶನದಲ್ಲಿ ಟಾಲಿವುಡ್ ನಟಿ ಲಕ್ಷ್ಮಿ ಮಂಚು ಪಾಲ್ಗೊಂಡಿದ್ದು, ಈ ವೇಳೆ ಯುವಕನೊಬ್ಬ ಅಡ್ಡ ಬಂದಿದ್ದಕ್ಕೆ ಗರಂ ಆದ ಅವರು ಅವನ ಬೆನ್ನ ಮೇಲೆ ಹೊಡೆದಿದ್ದಾರೆ. ಅಷ್ಟೇ ಅಲ್ಲ ತೆಲುಗಿನಲ್ಲಿ ಆತನಿಗೆ ಗದರಿದ್ದಾರೆ.
ಆದರೆ ದುರಾದೃಷ್ಟಕ್ಕೆ ಮತ್ತೊಬ್ಬ ಈ ಸಂದರ್ಶನಕ್ಕೆ ಇದೇ ವೇಳೆ ಅಡ್ಡ ಬಂದಿದ್ದು, ಆಗ ಮತ್ತಷ್ಟು ಕೆಂಡಾಮಂಡಲರಾದ ಲಕ್ಷ್ಮೀ ಮಂಚು, ‘Drrr’ ಎನ್ನುವುದರ ಜೊತೆಗೆ ಆತನನ್ನು ಅಲ್ಲಿಂದ ಹೋಗುವಂತೆ ಹೇಳಿದ್ದಾರೆ.
ಅವರ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಥರಹೇವಾರಿ ಕಾಮೆಂಟ್ ಗಳಿಗೆ ಕಾರಣವಾಗಿದೆ. ಬಹಳಷ್ಟು ಜನ ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದರೆ, ಮತ್ತಷ್ಟು ಮಂದಿ ನಟಿ ಆ ರೀತಿ ವರ್ತಿಸಬಾರದಿತ್ತು ಎಂದಿದ್ದಾರೆ.