alex Certify ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಬಗ್ಗೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಬಗ್ಗೆ ಮುಖ್ಯ ಮಾಹಿತಿ

ಧಾರವಾಡ: 2020-21 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರ ಸಾಮಾನ್ಯ ವರ್ಗಾವಣೆಗಳನ್ನು ಕಡ್ಡಾಯವಾಗಿ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸಲಾಗುವುದು.

ಪ್ರಾಥಮಿಕ ಶಾಲಾ ಶಿಕ್ಷಕರ ಕೋರಿಕೆ ವರ್ಗಾವಣೆಯನ್ನು ಅಂತಿಮ ಆದ್ಯತಾ ಪಟ್ಟಿಯಂತೆ ಜನವರಿ 19, 2021 ರಿಂದ ಜನವರಿ 23, 2021 ರ ವರೆಗೆ, ಪರಸ್ಪರ ವರ್ಗಾವಣೆ ಜನವರಿ 27 ರಿಂದ ಹಾಗೂ ಪ್ರೌಢ ಶಾಲಾ ಶಿಕ್ಷಕರ ವೃಂದದ ಕಡ್ಡಾಯ, ಹೆಚ್ಚುವರಿ(2019-20 ರ) ವರ್ಗಾವಣೆಗಳನ್ನು ಡಿಸೆಂಬರ್ 18 ಹಾಗೂ 19, 2020 ಮತ್ತು ಕೋರಿಕೆ ವರ್ಗಾವಣೆಯನ್ನು ಜನವರಿ 29, 2021 ರಿಂದ ಫೆಬ್ರವರ  2 ರವರೆಗೆ, ಪರಸ್ಪರ ವರ್ಗಾವಣೆಯನ್ನು ಫೆಬ್ರವರಿ 6 ರಂದು ಗಣಕೀಕೃತ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಲಾಗುವುದು.

ಈ ಕುರಿತು ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಇಲಾಖಾ ಜಾಲತಾಣದಲ್ಲಿ ವಿವರವಾದ ಸೂಚನೆಗಳುಳ್ಳ ಅಧೀಕೃತ ಜ್ಞಾಪನದ ಮೂಲಕ ವಿವರವಾದ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಅದರಂತೆ ಬೆಳಗಾವಿ ವಿಭಾಗದ ಆಸಕ್ತ ಅಧಿಕಾರಿಗಳು ಆನ್‍ಲೈನ್ ಶಿಕ್ಷಕ ಮಿತ್ರ, ಇಇಡಿಎಸ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲೆಯ ಉಪನಿರ್ದೇಶಕರನ್ನು ಹಾಗೂ ಸಂಬಂಧಿಸಿದ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹನಿರ್ದೇಶಕರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...