ಪ್ರವಾಸ ಪ್ರಿಯರ ನೆಚ್ಚಿನ ಆಕರ್ಷಕ ತಾಣ ‘ತವಾಂಗ್’

ಅರುಣಾಚಲ ಪ್ರದೇಶದಲ್ಲಿರುವ ತವಾಂಗ್ ಆಕರ್ಷಕ ಹಾಗೂ ಜನಪ್ರಿಯ ಗಿರಿಧಾಮಗಳಲ್ಲಿ ಒಂದು. ಇಲ್ಲಿ ಸರೋವರಗಳು, ಜಲಪಾತಗಳು, ಸ್ಮಾರಕಗಳು ಇವೆ.

ಅಪ್ರತಿಮ ಸೌಂದರ್ಯ ಹೊಂದಿರುವ ಇದು ಕೇವಲ ಪಟ್ಟಣ ಮಾತ್ರವಲ್ಲ ರಮಣೀಯ ತಾಣವೂ ಹೌದು. ಇಲ್ಲಿರುವ ಎತ್ತರದ ಶಿಖರಗಳು, ದಟ್ಟವಾದ ಕಣಿವೆಗಳು, ಚಾರಣ, ಪ್ಯಾರಾಗ್ಲೈಡಿಂಗ್ ಗೆ ಸೂಕ್ತವಾದ ತಾಣಗಳಾಗಿವೆ.

ಶಾರೂಖ್ ಖಾನ್ ಮತ್ತು ಮಾಧುರಿ ನಟಿಸಿರುವ ಕೋಯ್ಲಾ ಚಿತ್ರದ ತನ್ಹಾಯಿ ಹಾಡಿನ ಚಿತ್ರಿಕರಣ ನಡೆದ ಜಂಗ್ ಫಾಲ್ಸ್ ಅಥವಾ ಬಾಂಗ್ ಬಾಂಗ್ ಫಾಲ್ಸ್ ಇಂದಿಗೂ ಅದೇ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲು ಇದು ಅತ್ಯುತ್ತಮ ತಾಣ.

ತವಾಂಗ್ ನ ಅತ್ಯುತ್ತಮ ಹಾಗೂ ಜನಪ್ರಿಯ ಸರೋವರಗಳಲ್ಲಿ ಪಂಕಾಂಗ್ ಟೆಂಗ್ ತ್ಸೊ ಸರೋವರವೂ ಒಂದು. ಬೇಸಿಗೆ ಇದು ನೀಲಿ ಲ್ಯಾಪಿಸ್ ಹೂವುಗಳಿಂದ ಆವೃತವಾದರೆ ಚಳಿಗಾಲದಲ್ಲಿ ಹಿಮದ ಹೊದಿಕೆಯಲ್ಲಿ ಅಡಗಿರುತ್ತದೆ.

ಸೆಲಾ ಪಾಸ್ ಎಂಬ ಕಣಿವೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣವಾಗಿದೆ. ಇದು ಸಮುದ್ರ ಮಟ್ಟದಿಂದ 14 ಸಾವಿರ ಅಡಿ ಎತ್ತರದಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read