BIG NEWS: ಎನ್ ಸಿಸಿ ಶಿಬಿರದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; 9 ಆರೋಪಿಗಳು ಅರೆಸ್ಟ್

ಎನ್ ಸಿಸಿ ಶಿಬಿರವೊಂದರಲ್ಲಿ 12 ವರ್ಷದ ವಿದ್ಯಾರ್ಥಿನಿ ಮೇಲೆ ದುರುಳರು ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಬರ್ಗೂರಿನ ಶಾಲೆಯೊಂದರಲ್ಲಿ ಎನ್ ಸಿಸಿ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ 12 ವರ್ಷದ ವಿದ್ಯಾರ್ಥಿನಿ ಸೇರಿದಂತೆ 17 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಬಿರದ ವೇಳೆ ಶಾಲೆಯ ಸಭಾಂಗಣದಲ್ಲಿ ಮಲಗುತ್ತಿದ್ದರು.

ಈ ವೇಳೆ 12 ವರ್ಷದ ವಿದ್ಯಾರ್ಥಿನಿ ಮೇಲೆ ಎನ್ ಟಿಕೆ ಪಕ್ಷದ ಕಾರ್ಯಕರ್ತ ಶಿವರಾಮನ್ ಎಂಬಾತ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಎರಡು ದಿನಗಳ ಹಿಂದೆ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದು, ಪೋಷಕರು ವಿಚರಿಸಿದಾಗ ಶಿಬಿರದಲ್ಲಿ ಭಾಗವಹಿಸಿದ್ದ ಶಿವರಾಮನ್ ಎಂಬಾತ ಮಲಗಿದ್ದಾಗ ತನ್ನನ್ನು ಎಬ್ಬಿಸಿ ಏಕಾಂತ ಸ್ಥಳಕ್ಕೆ ಕರೆದೊಯ್ದು ದೌರ್ಜನ್ಯವೆಸಗಿದ್ದಾನೆ ಎಂದು ತಿಳಿಸಿದ್ದಾಳೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.

ವಿದ್ಯಾರ್ಥಿನಿ ಶಾಲೆಯ ಪ್ರಾಂಶುಪಾಲ ಹಾಗೂ ಶಿಕ್ಷಕರಿಗೆ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ 9 ಆರೋಪಿಗಳನ್ನು ಬಂಧಿಸಲಾಗಿದೆ. ಶಿವರಾಮನ್, ಸತೀಶ್ ಕುಮಾರ್, ಜೆನ್ನಿಫರ್, ಸ್ಯಾಮ್ಸನ್ ವೆಸ್ಲಿ, ಶಕ್ತಿವೇಲ್, ಸಿಂಧು, ಸತ್ಯ ಮತ್ತು ಸುಬ್ರಹ್ಮಣಿ ಸೇರಿದಂತೆ ಒಂಭತ್ತು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿ ಶಿವರಾಮನ್ ಹಾಗೂ ಸುಧಾಕರನ್ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು, ತಲೆಮರೆಸಿಕೊಂಡಿದ್ದ ಶಿವರಾಮನ್ ನ್ನು ಬಂಧಿಸಲಾಗಿದೆ. ಸುಧಾಕರನ್ ಗಾಗಿ ಹುಡುಕಾಟ ನಡೆಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read