ಶಾಸಕರ ಅತೃಪ್ತಿ ಶಮನಕ್ಕೆ 146 ತಹಶೀಲ್ದಾರ್ ದಿಢೀರ್ ವರ್ಗಾವಣೆ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ವರ್ಗಾವಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ 146 ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿದೆ.

ಗ್ರೇಡ್ -1, ಗ್ರೇಡ್ -2 ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ವರ್ಗಾವಣೆಗೊಂಡ ತಹಶೀಲ್ದಾರ್ ಗಳಲ್ಲಿ 22 ಮಂದಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಮುಂದುವರೆಸಲು ತಿಳಿಸಲಾಗಿದೆ. ಒಟ್ಟು ಮೂರು ಪಟ್ಟಿಯಲ್ಲಿ 146 ರಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಲಾಗಿದೆ. ಇನ್ನೂ ಹಲವರ ವರ್ಗಾವಣೆ ಪಟ್ಟಿ ಸಿಎಂ ಅನುಮೋದನೆಗೆ ಬಾಕಿ ಇದೆ ಎಂದು ಹೇಳಲಾಗಿದೆ.

ತಮ್ಮಿಷ್ಟಕ್ಕೆ ತಕ್ಕಂತೆ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಸಚಿವರು, ಶಾಸಕರ ನಡುವಿನ ತಿಕ್ಕಾಟದಿಂದ ತಹಶೀಲ್ದಾರ್ ಗಳ ವರ್ಗಾವಣೆ ಪ್ರಕ್ರಿಯೆ ಬಾಕಿ ಉಳಿದಿದ್ದು, ಮೂರು ಕಂತಿನಲ್ಲಿ ಪ್ರತ್ಯೇಕ ವರ್ಗಾವಣೆ ಮಾಡಲಾಗಿದೆ. ಶಾಸಕರ ಕೋರಿಕೆಯಂತೆ ವರ್ಗಾವಣೆ ಮಾಡಲಾಗಿದ್ದು, ಒಂದು ಪಟ್ಟಿಯಲ್ಲಿ 84, ಮತ್ತೊಂದು ಪಟ್ಟಿಯಲ್ಲಿ 46, ಇನ್ನೊಂದು ಪಟ್ಟಿಯಲ್ಲಿ 16 ತಹಶೀಲ್ದಾರ್ ಗಳನ್ನು ವರ್ಗಾವಣೆ ಮಾಡಲಾಗಿದೆ. ಶಾಸಕರ ಬೇಡಿಕೆಯಂತೆ ಇನ್ನೊಂದು ವರ್ಗಾವಣೆ ಪಟ್ಟಿ ಸಿದ್ದಪಡಿಸಿದ್ದು, ಸಿಎಂ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read