ಟಿ20 ವಿಶ್ವಕಪ್; ನಮೀಬಿಯಾ ತಂಡದ ಎದುರು ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ

ಇಂದು ನಡೆದ ಟಿ20 ವಿಶ್ವಕಪ್ ನ 24ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನಮೀಬಿಯಾ ಎದುರು 9 ವಿಕೆಟ್ ಗಳಿಂದ ಜಯಭೇರಿ ಸಾಧಿಸಿದೆ. ಈ ಮೂಲಕ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಜಯದ  ಓಟವನ್ನು ಮುಂದುವರಿಸಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ ತಂಡದ ಬೌಲಿಂಗ್ ದಾಳಿಗೆ ನಮೀಬಿಯಾ ತತ್ತರಿಸಿ ಹೋಗಿದೆ. ಆಡಮ್ ಝಂಪಾ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿದ್ದಾರೆ. ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಒಬ್ಬರೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಒಟ್ಟಾರೆ ನಮೀಬಿಯಾ ತಂಡ ಕೇವಲ 72 ರನ್ ಗಳ ಸಾಧಾರಣ ಮೊತ್ತ ದಾಖಲಿಸುವ ಮೂಲಕ ಆಲ್ ಔಟ್ ಆಗಿದೆ.

ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕೇವಲ ಒಂದು  ವಿಕೆಟ್ ಕಳೆದುಕೊಳ್ಳುವ ಮೂಲಕ 5.4 ಓವರ್ನಲ್ಲೇ ಪಂದ್ಯ  ಮುಗಿಸಿದ್ದಾರೆ. ಎಂದಿನಂತೆ ಟ್ರಾವಿಸ್ ಹೆಡ್ ಕೇವಲ 17 ಎಸೆತಗಳಲ್ಲಿ 34 ರನ್ ಸಿಡಿಸುವ ಮೂಲಕ  ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡ ಸೂಪರ್ 8 ಗೆ ಬರುವುದು ಖಚಿತವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read