ಟಿ20 ವಿಶ್ವಕಪ್ : ಭಾರತ – ಪಾಕ್ ಪಂದ್ಯದ ಟಿಕೆಟ್ ದರ ಕೇಳಿದ್ರೆ ದಂಗಾಗ್ತೀರಿ…!

ಹೊಸ ವರ್ಷದ ಆರಂಭದಿಂದಲೇ ಕ್ರಿಕೆಟ್‌ ಪ್ರೇಮಿಗಳಿಗೆ ಒಂದಾದ್ಮೇಲೆ ಒಂದರಂತೆ ಕ್ರಿಕೆಟ್‌ ಪಂದ್ಯಾವಳಿ ನೋಡುವ ಅವಕಾಶ ಸಿಗ್ತಿದೆ. ಈ ಮಧ್ಯೆ ಈ ವರ್ಷ ಟಿ –ಟ್ವೆಂಟಿ ವಿಶ್ವಕಪ್‌ ನಡೆಯಲಿದ್ದು, ಕ್ರಿಕೆಟ್‌ ಪ್ರೇಮಿಗಳು ಪಂದ್ಯ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ.

ಜೂನ್ 1 ರಿಂದ 29 ರ ವರೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಪಂದ್ಯ ನಡೆಯಲಿದೆ. ಐಸಿಸಿ ಟಿ20 ವಿಶ್ವಕಪ್ 2024 ಗಾಗಿ ಟಿಕೆಟ್‌ಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಜನಸಾಮಾನ್ಯರೂ ಈ ಟಿಕೆಟ್‌ ಖರೀದಿ ಮಾಡ್ಬಹುದು. ಟಿ20 ವಿಶ್ವಕಪ್‌ ವೀಕ್ಷಣೆಗೆ ಆಸಕ್ತಿ ಇದ್ರೆ ಈಗ್ಲೇ ಟಿಕೆಟ್‌ ಖರೀದಿ ಮಾಡಿ. ಐಸಿಸಿ ನೀಡಿದ ಟಿಕೆಟ್‌ಗಳ ಅತ್ಯಂತ ಕಡಿಮೆ ದರ 6 ಡಾಲರ್‌ ಅಂದ್ರೆ 500 ರೂಪಾಯಿ. ಅತ್ಯಂತ ದುಬಾರಿ ಟಿಕೆಟ್ ಬೆಲೆ 25 ಡಾಲರ್ ಅಂದ್ರೆ 2071 ರೂಪಾಯಿ.

ನೀವು t20worldcup.com ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಒಬ್ಬ ವ್ಯಕ್ತಿ ಒಂದು ಐಡಿಯಿಂದ ಪಂದ್ಯದಲ್ಲಿ ಗರಿಷ್ಠ 6 ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಎಲ್ಲ ಪಂದ್ಯಕ್ಕಿಂತ ಭಾರತ- ಪಾಕಿಸ್ತಾನದ ಮಧ್ಯೆ ನಡೆಯುವ ಪಂದ್ಯ ಹೆಚ್ಚು ಕುತೂಹಲದಿಂದ ಕೂಡಿರುತ್ತದೆ. ಹಾಗಾಗಿಯೇ ಇದ್ರ ಬೆಲೆ ದುಬಾರಿ. ನೀವು ಭಾರತ – ಪಾಕ್‌ ಪಂದ್ಯ ವೀಕ್ಷಣೆ ಮಾಡೋದಾದ್ರೆ 175 ಡಾಲರ್‌ ಅಂದ್ರೆ ಸುಮಾರು 14450 ರೂಪಾಯಿ ಪಾವತಿಸಬೇಕು. ಸ್ಟ್ಯಾಂಡರ್ಡ್ ಪ್ಲಸ್‌ಗೆ ನೀವು ಹೆಚ್ಚಿನ ಹಣವನ್ನು ಪಾವತಿಸಬೇಕು. ಭಾರತ – ಪಾಕ್‌ ಪಂದ್ಯದ ದುಬಾರಿ ಟಿಕೆಟ್‌ ಬೆಲೆ 33000 ರೂಪಾಯಿಯಾಗಿದ್ದು, ಅದು ಸ್ಟ್ಯಾಂಡರ್ಡ್‌ ಕ್ಯಾಟಗರಿಯಲ್ಲಿ ಬರುತ್ತದೆ. ನ್ಯೂಯಾರ್ಕ್‌ ನಲ್ಲಿ ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪಂದ್ಯ ನಡೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read