ಸೈಬರ್ ದಾಳಿಯಿಂದ ಸುಜುಕಿ ಮೋಟಾರ್‌ಸೈಕಲ್ ಉತ್ಪಾದನೆ ಸ್ಥಗಿತ

ಸೈಬರ್ ದಾಳಿಯಿಂದಾಗಿ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಕಾರ್ಖಾನೆಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸಿದೆ. ಮಾಹಿತಿ ಪ್ರಕಾರ ಮೇ 10 ರಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಸಮಯದಲ್ಲಿ 20,000 ಕ್ಕೂ ಹೆಚ್ಚು ವಾಹನಗಳ ಉತ್ಪಾದನೆಯು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ ಇರುವ ಸಮಸ್ಯೆ ಬಗೆಹರಿಸಬೇಕಾಗಿರುವ ಕಾರಣ ಮುಂದಿನ ವಾರ ನಡೆಯಬೇಕಿದ್ದ ತನ್ನ ವಾರ್ಷಿಕ ಪೂರೈಕೆದಾರ ಸಮ್ಮೇಳನವನ್ನು ಮುಂದೂಡಿದೆ ಎಂದು ತಿಳಿದು ಬಂದಿದೆ.

ಸೈಬರ್ ದಾಳಿ ಬಗ್ಗೆ ತಿಳಿಸಿರುವ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ವಕ್ತಾರರು, “ನಮಗೆ ಘಟನೆಯ ಬಗ್ಗೆ ತಿಳಿದಿದೆ ಮತ್ತು ತಕ್ಷಣವೇ ಸಂಬಂಧಪಟ್ಟ ಸರ್ಕಾರಿ ಇಲಾಖೆಗೆ ವರದಿ ಮಾಡಿದ್ದೇವೆ. ವಿಷಯವು ಪ್ರಸ್ತುತ ತನಿಖೆಯಲ್ಲಿದೆ ಮತ್ತು ಭದ್ರತಾ ಉದ್ದೇಶಗಳಿಗಾಗಿ ಈ ಸಮಯದಲ್ಲಿ ಹೆಚ್ಚಿನ ವಿವರಗಳನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ”. ಎಂದಿದ್ದಾರೆ. ದಾಳಿಯ ಮೂಲವನ್ನು ಅಥವಾ ಉತ್ಪಾದನೆಯು ಮತ್ತೆ ಯಾವಾಗ ಪುನರಾರಂಭಗೊಳ್ಳುತ್ತದೆ ಎಂಬುದನ್ನು ವಕ್ತಾರರು ನಿರ್ದಿಷ್ಟಪಡಿಸಿಲ್ಲ.

ಸುಜುಕಿ ಮೋಟಾರ್‌ಸೈಕಲ್ ಆರ್ಥಿಕ ವರ್ಷ 23 ರಲ್ಲಿ ದೇಶದ ಐದನೇ ಅತಿ ದೊಡ್ಡ ದ್ವಿಚಕ್ರ ವಾಹನ ಉತ್ಪಾದಕವಾಗಿದ್ದು, ಸುಮಾರು ಒಂದು ಮಿಲಿಯನ್ ಯೂನಿಟ್‌ಗಳ ಉತ್ಪಾದನೆಯನ್ನು ಹೊಂದಿದೆ. ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ಜಾಗತಿಕ ಉತ್ಪಾದನೆಯಲ್ಲಿ ಭಾರತವು 50 ಪ್ರತಿಶತವನ್ನು ಹೊಂದಿದೆ ಮತ್ತು ಕಳೆದ ಹಣಕಾಸು ವರ್ಷದಲ್ಲಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ. FY23 ರಲ್ಲಿ ಸುಜುಕಿಯ ಜಾಗತಿಕ ಉತ್ಪಾದನೆಯು 2.2 ಲಕ್ಷ ಯೂನಿಟ್‌ಗಳಷ್ಟು ಹೆಚ್ಚಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read