
ಬೆಂಗಳೂರು: ಸರ್ವೇ ಕಾರ್ಯಕ್ಕೆ ಮತ್ತಷ್ಟು ವೇಗ ನೀಡುವ ಸಲುವಾಗಿ ಸರ್ಕಾರ ಕ್ರಮ ಕೈಗೊಂಡಿದ್ದು, 991 ಪರವಾನಿಗೆ ಸರ್ವೇಯರ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.
991 ಪರವಾನಿಗೆ ಹೊಂದಿದ ಸರ್ವೇ ಯರ್ ಗಳ ಜೊತೆಗೆ 364 ಸರ್ಕಾರಿ ಸರ್ವೇಯರ್ ಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ. ಸರ್ವೇ ಕೆಲಸದ ಮೇಲುಸ್ತುವಾರಿಗೆ 27 ಎ.ಡಿ.ಎಲ್.ಆರ್.ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಸರ್ವೇ ಕೆಲಸವನ್ನು ವೇಗವಾಗಿಸಲು ಎಲ್ಲ ತಾಲೂಕಿಗಳಿಗೂ ಸರ್ವೇ ರೋವರ್ ಉಪಕರಣ ಖರೀದಿಸಲಾಗುತ್ತಿದೆ. 18 ಕೋಟಿ ರೂ. ವೆಚ್ಚದಲ್ಲಿ ಒಟ್ಟು 372 ಸರ್ವೇ ರೋವರ್ ಗಳನ್ನು ಖರೀದಿಸಲಿದ್ದು, ತಾಲೂಕುಗಳಿಗೆ ಟೋಟಲ್ ಸ್ಟೇಷನ್ ಸರ್ವೇ ಉಪಕರಣಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.