ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಅಭಿಮನ್ಯು ಕಾಶಿನಾಥ್ ಅಭಿನಯದ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ “ಸೃಷ್ಟಿದಾತ ಶಿವನೇ” ಎಂಬ ಲಿರಿಕಲ್ ಹಾಡು ಇಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಸಾಯಿ ವಿಘ್ನೇಶ್ ಮತ್ತು ನಮಿತಾ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಅರುಣ ಗಿರಿ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ನಿರ್ದೇಶಕ ಯಾದವ್ ರಾಜ್ ಅವರ ಸಾಹಿತ್ಯವಿದೆ.
ಯಾದವ್ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ಅಭಿಮನ್ಯು ಕಾಶಿನಾಥ್ ಹಾಗೂ ಅಪೂರ್ವ ಪ್ರಮುಖ ಪಾತ್ರದಲ್ಲಿದ್ದು, ಪ್ರತಾಪ್ ನಾರಾಯಣ್, ಪ್ರದೀಪ್, ಭಜರಂಗಿ ಪ್ರಸನ್ನ, ಪಲ್ಲವಿ ಉಳಿದ ಉಳಿದ ತಾರಾಂಗಣದಲ್ಲಿದ್ದಾರೆ. 7 crore ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ನಲ್ಲಿ ಕೇಟಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಶ್ರೀನಿವಾಸ್ ಛಾಯಾಗ್ರಹಣ, ರಾಜ್ ಕಿಶೋರ್ ನೃತ್ಯ ನಿರ್ದೇಶನ, ಸಿದ್ದಾರ್ಥ್ ನಾಯಕ್ ಸಂಕಲನ, ಡಿಫರೆಂಟ್ ಡ್ಯಾನಿ – ದಿನೇಶ್ ಕಾಸಿ ಸಾಹಸ ನಿರ್ದೇಶನವಿದೆ.