ನಾಚಿಕೆಗೇಡಿ ಕೃತ್ಯ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ರು ಈ ಸೂಪರ್ ಸ್ಟಾರ್…!

ರಣಬೀರ್ ಕಪೂರ್, ಅತ್ಯಂತ ಯಶಸ್ವಿ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ನಟ. ಅವರ ಪ್ರಾಜೆಕ್ಟ್ ಆಯ್ಕೆಗಳು ಮತ್ತು ಅವರು ನಿರ್ವಹಿಸುವ ಪಾತ್ರಗಳ ಬಗೆಗಿನ ಸಮರ್ಪಣಾ ಭಾವ ಅವರನ್ನು ಪ್ರಮುಖ ತಾರೆಯರ ಲಿಸ್ಟ್‌ ನಲ್ಲಿ ನಿಲ್ಲಿಸುತ್ತದೆ.

ಅನಿಮಲ್, ಬ್ರಹ್ಮಾಸ್ತ್ರ, ಬರ್ಫಿ ಮತ್ತು ರಾಕ್‌ಸ್ಟಾರ್‌ ನಂತಹ ಹಿಟ್‌ಗಳೊಂದಿಗೆ ಅವರ ಖ್ಯಾತಿ ಗಗನಕ್ಕೇರಿದೆ. ಮುಂಬರುವ ವರ್ಷಗಳಲ್ಲಿ ಅವರು ಅನಿಮಲ್ ಪಾರ್ಕ್, ರಾಮಾಯಣ, ಬ್ರಹ್ಮಾಸ್ತ್ರ 2 ಮತ್ತು ಅನೇಕ ಚಲನಚಿತ್ರಗಳ ಪ್ರಾಜೆಕ್ಟ್‌ ಒಪ್ಪಿಕೊಂಡಿರುವುದರಿಂದ ಇನ್ನೂ ಹಲವು ವರ್ಷಗಳ ಕಾಲ ಫುಲ್‌ ಬ್ಯುಸಿಯಾಗಿದ್ದಾರೆ.

ಅವರ ವೈಯಕ್ತಿಕ ಜೀವನದಲ್ಲಿಯೂ ಸಂತೃಪ್ತರಾಗಿರುವ ಅವರು ಆಲಿಯಾ ಭಟ್ ಮತ್ತು ತಮ್ಮ ಮಗು ಜೊತೆ ಆನಂದಮಯ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಅಭಿಮಾನಿಗಳ ನೆಚ್ಚಿನ ರಣಬೀರ್ ಅಧಿಕೃತವಾಗಿ ಸಾಮಾಜಿಕ ಮಾಧ್ಯಮದಲ್ಲಿಲ್ಲ. ಆದರೆ ಅವರನ್ನು ಕೆಲವೊಂದು ವಿವಾದಗಳು ಈ ಹಿಂದೆ ಸುತ್ತಿಕೊಂಡಿದ್ದವು.

ಇದೆಲ್ಲದರ ಮಧ್ಯೆ ಅವರು ಮಾಡಿದ ಒಂದು ಕೆಲಸದ ಕಾರಣಕ್ಕೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಹೌದು, ಭಾರತದ ಅನೇಕ ಪುರುಷರಂತೆ ರಣಬೀರ್ ತಮ್ಮ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಮೂತ್ರ ವಿಸರ್ಜಿಸಲು ಪ್ರಾರಂಭಿಸಿದ್ದರು. ಆಗ ಇದ್ದಕ್ಕಿದ್ದಂತೆ ಒಬ್ಬ ಪೋಲೀಸ್ ಅಧಿಕಾರಿ ಆಗಮಿಸಿ ಆಕ್ಷೇಪಿಸಿದ್ದರು. ಇದರಿಂದಾಗಿ ರಣಬೀರ್ ಕ್ಷಮೆಯಾಚಿಸಿ ಮತ್ತೆ ಹಾಗೆ ಮಾಡುವುದಿಲ್ಲ ಎಂದು ಭರವಸೆ ನೀಡಬೇಕಾಯಿತು, ಆಗ ಪೊಲೀಸ್‌ ಅಧಿಕಾರಿ ರಣಬೀರ್‌ ಅವರಿಗೆ ಯಾವುದೇ ದಂಡ ವಿಧಿಸದೆ ಬಿಟ್ಟು ಕಳುಹಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read