ಹೇಮಾಮಾಲಿನಿ ಪುತ್ರಿಯರೊಂದಿಗೆ ಇದೇ ಮೊದಲ ಬಾರಿಗೆ ಧರ್ಮೇಂದ್ರ ಪುತ್ರರ ರಕ್ಷಾ ಬಂಧನ…! 20-08-2023 10:29AM IST / No Comments / Posted In: Featured News, Live News, Entertainment ಬಾಲಿವುಡ್ ನಟ ಸನ್ನಿ ಡಿಯೋಲ್ ಪ್ರಸ್ತುತ ಇತ್ತೀಚೆಗೆ ಬಿಡುಗಡೆಯಾದ ಗದರ್-2 ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಈ ನಡುವೆ, ನಟ ಸನ್ನಿ ಮತ್ತು ಅವರ ಸಹೋದರ ಬಾಬಿ ಡಿಯೋಲ್ ಅವರು ಹೇಮಾ ಮಾಲಿನಿ ಅವರ ಪುತ್ರಿಯರಾದ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಜೊತೆ ರಕ್ಷಾ ಬಂಧನ ಹಬ್ಬವನ್ನು ಮೊದಲ ಬಾರಿಗೆ ಆಚರಿಸಲಿದ್ದಾರೆ ಎಂದು ಎನ್ನಲಾಗಿದೆ. ಸಹೋದರ-ಸಹೋದರಿಯರ ಭ್ರಾತೃತ್ವದ ಹಬ್ಬವಾದ ರಕ್ಷಾ ಬಂಧನಕ್ಕೆ ಹೇಮಾ ಮಾಲಿನಿಯವರ ಪುತ್ರಿಯರನ್ನು ಭೇಟಿ ಮಾಡುತ್ತಾರೆ ಎಂದು ಹೇಳಲಾಗಿದೆ. ಸದ್ಯ ಸನ್ನಿ ಡಿಯೋಲ್ ಗದರ್-2 ಯಶಸ್ಸಿನ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಹಿಂದಿನದ್ದೆಲ್ಲಾ ಮರೆತು ವರ್ತಮಾನದತ್ತ ಗಮನಹರಿಸಲು ಬಯಸುತ್ತಿದ್ದಾರೆ. ಹೀಗಾಗಿ ಈ ಬಾರಿ ಅವರು ಸಹೋದರರಾದ ಬಾಬಿ ಡಿಯೋಲ್ ಮತ್ತು ಅಭಯ್ ಡಿಯೋಲ್ ಅವರೊಂದಿಗೆ ರಾಖಿ ಕಟ್ಟಲು ತಮ್ಮ ಸಹೋದರಿಯರು ಇರುವಲ್ಲಿಗೆ ಭೇಟಿ ನೀಡಬಹುದು ಎಂದು ಎಂಟರ್‌ಟೈನ್‌ಮೆಂಟ್ ಪೋರ್ಟಲ್ ಉಲ್ಲೇಖಿಸಿದೆ. ಇನ್ನು ಇದೇ ಮೊದಲ ಬಾರಿಗೆ ಇಶಾ ತನ್ನ ಸಹೋದರರಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರೊಂದಿಗಿನ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ನಟಿ ಹೇಮಾ ಮಾಲಿನಿ ಅವರೊಂದಿಗೆ ಎರಡನೇ ಮದುವೆಯಾದ ನಟ ಧರ್ಮೇಂದ್ರ ಅವರಿಗೆ ಇಬ್ಬರು ಪುತ್ರಿಯರು. ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಇವರ ಪುತ್ರಿಯರು. ಬಾಲಿವುಡ್‌ನ ಡ್ರೀಮ್ ಗರ್ಲ್ ಅನ್ನು ಮದುವೆಯಾಗುವ ಮುನ್ನ ಧರ್ಮೇಂದ್ರ ಅವರು ಪ್ರಕಾಶ್ ಕೌರ್ ಅವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಇವರ ಪುತ್ರರು. ಧರ್ಮೇಂದ್ರ ಅವರು ಕೇವಲ 19 ವರ್ಷ ವಯಸ್ಸಿನವರಾಗಿದ್ದಾಗ 1954ರಲ್ಲಿ ಪ್ರಕಾಶ್ ಕೌರ್ ಅವರನ್ನು ವಿವಾಹವಾದ್ರು. ಪ್ರಕಾಶ್‌ಗೆ ವಿಚ್ಛೇದನ ನೀಡದೆ ಹೇಮಾಳನ್ನು ಧರ್ಮೇಂದ್ರ ವರಿಸಿದ್ದರು ಎನ್ನಲಾಗಿದೆ. Friends love 💕 you all for making Gadar 2 a big success 🙏……Togetherness a great blessing 🙏 pic.twitter.com/ftvGI5OWGO — Dharmendra Deol (@aapkadharam) August 13, 2023