ಬೇಸಿಗೆಯಲ್ಲಿ ಸೂರ್ಯನ ಬಿಸಿಲಿಗೆ ಹೊರಹೋದಾಕ್ಷಣ ಸನ್ ಟ್ಯಾನ್ ಆಗುವುದುಂಟು. ಹಾಗೆಂದು ಹಗಲಿಡೀ ಮನೆಯೊಳಗೆ ಕುಳಿತುಕೊಳ್ಳಲು ಸಾಧ್ಯವೇ…? ಟ್ಯಾನಿಂಗ್ ಸಮಸ್ಯೆಗೆ ಮನೆಯಲ್ಲೇ ಇರುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು.
ಟೊಮೆಟೊ ಕತ್ತರಿಸಿ ಒಂದು ಚಮಚದಷ್ಟು ರಸ ತೆಗೆದು ಅದಕ್ಕೆ ನಾಲ್ಕು ಹನಿ ನಿಂಬೆರಸ ಸೇರಿಸಿ ಫೇಸ್ ಮಾಸ್ಕ್ ತಯಾರಿಸಿ.
ಮುಖವನ್ನು ಸ್ವಚ್ಛವಾಗಿ ತೊಳೆದು ಇದನ್ನು ಹಚ್ಚಿ ಅರ್ಧ ಗಂಟೆ ಬಳಿಕ ಮುಖ ತೊಳೆದರೆ ಮುಖ ಸ್ವಚ್ಛವಾಗುತ್ತದೆ.
ಸೂಕ್ಷ್ಮ ತ್ವಚೆ ನಿಮ್ಮದಾಗಿದ್ದರೆ ಇದರ ಬದಲು ಗೋಧಿ ಹಿಟ್ಟು ಹಾಗೂ ರೋಸ್ ವಾಟರ್ ಬೆರೆಸಿ ಪೇಸ್ಟ್ ತಯಾರಿಸಿ. ಇದಕ್ಕೆ ಅರಶಿನ ಪುಡಿ ಚಿಮುಕಿಸಿ. ಮುಖದ ಮೇಲೆ ಹಚ್ಚಿ ಒಣಗಲು ಬಿಡಿ. 20 ನಿಮಿಷದ ಬಳಿಕ ಮುಖ ತೊಳೆದರೆ ಕಲೆ ಮಾಯವಾಗುತ್ತದೆ.