alex Certify ಹುಮಾಯೂನ್ ನಿಂದ ರಕ್ಷಾ ಬಂಧನ ಆರಂಭದ ದಂತಕಥೆ ಹೇಳಿ ಟ್ರೋಲ್ ಗೆ ಒಳಗಾಗಿದ್ದ ಸುಧಾ ಮೂರ್ತಿ ಸ್ಪಷ್ಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಮಾಯೂನ್ ನಿಂದ ರಕ್ಷಾ ಬಂಧನ ಆರಂಭದ ದಂತಕಥೆ ಹೇಳಿ ಟ್ರೋಲ್ ಗೆ ಒಳಗಾಗಿದ್ದ ಸುಧಾ ಮೂರ್ತಿ ಸ್ಪಷ್ಟನೆ

ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರು ಸೋಮವಾರ ಹಂಚಿಕೊಂಡ ವೀಡಿಯೊ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾದ ನಂತರ ಸ್ಪಷ್ಟೀಕರಣವನ್ನು ನೀಡಿದ್ದಾರೆ.

ರಕ್ಷಾ ಬಂಧನದ ಮೂಲವನ್ನು ಮೊಘಲ್ ಚಕ್ರವರ್ತಿ ಹುಮಾಯೂನ್ ಮತ್ತು ಚಿತ್ತೋರ್‌ನ ರಾಣಿ ಕರ್ಣಾವತಿಗೆ ಸಂಬಂಧಿಸಿದಂತೆ ದಂತಕಥೆ ಹೇಳಿದ್ದ ಅವರು ಟ್ರೋಲ್ ಗೆ ಒಳಗಾಗಿದ್ದರು.

ಅವರ ಪೋಸ್ಟ್‌ ಗೆ ಟ್ರೋಲ್ ಗೆ ಒಳಗಾದ ಬಳಿಕ ಸುಧಾ ಮೂರ್ತಿ ಅವರು, ಅದು ರಾಖಿ ಹಬ್ಬಕ್ಕೆ ಸಂಬಂಧಿಸಿದ “ಹಲವು ಕಥೆಗಳಲ್ಲಿ ಒಂದಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ರಕ್ಷಾ ಬಂಧನದಲ್ಲಿ ಹಂಚಿಕೊಂಡ ಕಥೆಯು ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ಖಂಡಿತವಾಗಿಯೂ ರಕ್ಷಾಬಂಧನ ರಾಖಿ ಹಬ್ಬದ ಅದರ ಮೂಲವಲ್ಲ” ಎಂದು ಅವರು ಹೇಳಿದ್ದಾರೆ.

“ರಕ್ಷಾ ಬಂಧನಕ್ಕೆ ಶ್ರೀಮಂತ ಇತಿಹಾಸವಿದೆ. ರಾಣಿ ಕರ್ಣಾವತಿ ಆಪತ್ತಿನಲ್ಲಿದ್ದಾಗ, ರಾಜ ಹುಮಾಯೂನ್‌ಗೆ ಒಡಹುಟ್ಟಿದವರ ಸಂಕೇತವಾಗಿ ಒಂದು ದಾರವನ್ನು ಕಳುಹಿಸಿ ಸಹಾಯ ಕೇಳಿದಳು. ಇಲ್ಲಿಯೇ ರಾಖಿ  ಸಂಪ್ರದಾಯ ಪ್ರಾರಂಭವಾಯಿತು ಮತ್ತು ಅದು ಇಂದಿಗೂ ಮುಂದುವರೆದಿದೆ, ”ಎಂದು ಮೂರ್ತಿ ಅವರು ವೀಡಿಯೊವನ್ನು ಹಂಚಿಕೊಂಡಿದ್ದರು.

ಇದಕ್ಕೆ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ನೀವು 100 ಗಂಟೆ ಇತಿಹಾಸ ಓದಬೇಕು ಎಂದೆಲ್ಲಾ ಹೇಳಲಾಗಿತ್ತು. ಇದರ ಬೆನ್ನಲ್ಲೇ ಸುಧಾ ಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

ರಕ್ಷಾಬಂಧನದಂದು ನಾನು ಹಂಚಿಕೊಂಡ ಕಥೆ ರಾಖಿ ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ಆದರೆ, ಅದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿದ್ದು, ಇಂತಹ ಅನುಭವ ಈ ರೀತಿ ನನಗೆ ಹಿಂದೆಂದೂ ಆಗಿರಲಿಲ್ಲ. ಖಂಡಿತವಾಗಿಯೂ ಇದೊಂದೇ ಮೂಲಕತೆಯಲ್ಲ, ಈ ಬಗ್ಗೆ ನಾನು ವಿಡಿಯೋದಲ್ಲಿ ಉಲ್ಲೇಖಿಸಿದ್ದೇನೆ. ನಾನು ಬೆಳೆದ ಪರಿಸರದ ಅನೇಕ ಕಥೆಗಳಲ್ಲಿ ಒಂದನ್ನು ರಕ್ಷಾಬಂಧನದ ಹಿಂದಿನ ಸುಂದರವಾದ ಸಂಕೇತದ ಬಗ್ಗೆ ಹೈಲೈಟ್ ಮಾಡುವುದು ನನ್ನ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...