ಇಂಥಾ ವ್ಯಕ್ತಿಗಳಾಗಿರ್ತಾರೆ ಸರ್ವಶ್ರೇಷ್ಠರು

ನಮ್ಮ ಕೈ ನಮ್ಮ ವ್ಯಕ್ತಿತ್ವದ ಪ್ರತಿಬಿಂಬ. ನಮ್ಮ ಕೈ ಬೆರಳುಗಳು ಹಾಗೂ ರೇಖೆಗಳು ನಮ್ಮ ವ್ಯಕ್ತಿತ್ವದ ಜೊತೆಗೆ ಕೆಲವೊಂದು ರಹಸ್ಯಗಳನ್ನು ಬಿಚ್ಚಿಡುತ್ತವೆ. ವ್ಯಕ್ತಿಯ ಕೈ ಬೆರಳಿನ ಉದ್ದ ನೋಡಿ ಅವರ ಸ್ವಭಾವವನ್ನು ಹೇಳಬಹುದಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಣ್ಣ ಬೆರಳಿನ ಕೈ ಹೊಂದಿರುವ ವ್ಯಕ್ತಿ ಜೀವನದಲ್ಲಿ ಎಂದೂ ನಿರಾಶೆ ಹೊಂದುವುದಿಲ್ಲ. ಈ ವ್ಯಕ್ತಿಗಳು ಪ್ರತಿಯೊಂದು ಸಮಸ್ಯೆ ವಿರುದ್ಧ ಹೋರಾಡುವ ಶಕ್ತಿ ಹೊಂದಿರುತ್ತಾರೆ. ಅಪಾಯ ಬಂದಾಗ ಎಂದೂ ಹಿಂದೆ ಸರಿಯುವುದಿಲ್ಲ. ಸೃಜನಶೀಲ ಚಿಂತನೆಯಿಂದ ತೊಂದರೆಯನ್ನು ಸುಲಭವಾಗಿ ಬಗೆಹರಿಸಿಕೊಳ್ಳುತ್ತಾರೆ. ಸಂಬಂಧಗಳನ್ನು ನಿಭಾಯಿಸುವಾಗ ಮಾತ್ರ ಸಣ್ಣ ಕೈ ವ್ಯಕ್ತಿಗಳು ಹಿಂದೆ ಬೀಳ್ತಾರೆ.

ಉದ್ದದ ಬೆರಳುಳ್ಳ ದೊಡ್ಡ ಕೈ ಹೊಂದಿರುವ ವ್ಯಕ್ತಿಗಳು ಎಲ್ಲ ಕೆಲಸದಲ್ಲೂ ಸರ್ವಶ್ರೇಷ್ಠರಾಗಿರುತ್ತಾರೆ. ನೇರವಾಗಿ ಆಕಾಶ ಮುಟ್ಟುವ ಬಗ್ಗೆ ಯೋಚನೆ ಮಾಡದ ವ್ಯಕ್ತಿಗಳು ಇದಕ್ಕಾಗಿ ಯೋಜನೆ ರೂಪಿಸುತ್ತಾರೆ. ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುವ ಇವರು ಭಾವನಾತ್ಮಕವಾಗಿರುತ್ತಾರೆ. ಬಹು ಬೇಗ ಹರ್ಟ್ ಆಗುವ ಇವರು ಅತಿ ಬೇಗ ಪ್ರೀತಿಗೆ ಬೀಳ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read