alex Certify 1966ರ ಬ್ಯಾಚ್​ನ ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮಿಲನ: ನರ್ತಿಸಿದ ಅಜ್ಜಿಯಂದಿರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1966ರ ಬ್ಯಾಚ್​ನ ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮಿಲನ: ನರ್ತಿಸಿದ ಅಜ್ಜಿಯಂದಿರು

ಶಾಲಾ-ಕಾಲೇಜುಗಳ ದಿನಗಳ ಮೆಲುಕು ಹಾಕಲು ಸಮ್ಮಿಲನ ನಡೆಸುವುದು ಮಾಮೂಲು. ಆದರೆ ಇಲ್ಲೊಂದು ವಿಶೇಷವಾದ ಸಮ್ಮೇಳನ ನಡೆದಿದೆ.

ಅದೇನೆಂದರೆ 1966ರ ಕಾಲೇಜು ವಿದ್ಯಾರ್ಥಿಗಳ ಗುಂಪು ಪುನಃ ಸೇರಿದ್ದಾರೆ. ಇಂದು ಅಜ್ಜಿ- ಮುತ್ತಜ್ಜಿಯರಾಗಿರುವ ಈ ವಿದ್ಯಾರ್ಥಿನಿಯರು ಸೇರಿ ಡಾನ್ಸ್​ ಮಾಡಿದ್ದಾರೆ.

ಕೇರಳದ ಕ್ಯಾಲಿಕಟ್ ವೈದ್ಯಕೀಯ ಕಾಲೇಜಿನ 1966 ರ ಬ್ಯಾಚ್‌ನ ವಿದ್ಯಾರ್ಥಿಗಳ ಗುಂಪು ಇದಾಗಿದೆ. ಮಲಯಾಳಂ ಹಾಡಿನ ಪಾಲಾ ಪಲ್ಲಿಯಲ್ಲಿ ಇವರು ನೃತ್ಯ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿಸಿದ್ದಾರೆ. ಇವರ ವಿಡಿಯೋ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಇದನ್ನು ಡಾ ರಾಯ್ ಕಲ್ಲಿವಾಲಿಲ್ ಅವರು ಹಂಚಿಕೊಂಡಿದ್ದಾರೆ

ಈ ಕಿರು ವಿಡಿಯೋದಲ್ಲಿ ಕೇರಳದ ಕ್ಯಾಲಿಕಟ್ ವೈದ್ಯಕೀಯ ಕಾಲೇಜಿನ 1966 ರ ಬ್ಯಾಚ್‌ನ ವಿದ್ಯಾರ್ಥಿಗಳ ಗುಂಪು 2022 ರ ಕಡುವ ಚಲನಚಿತ್ರದ ಪೆಪ್ಪಿ ಹಾಡಿಗೆ ನೃತ್ಯ ಮಾಡಿದೆ. 75 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು, ಸುಂದರವಾದ ಸೀರೆಗಳಲ್ಲಿ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಈ ವೀಡಿಯೊ ಸಾಕಷ್ಟು ಗಮನ ಸೆಳೆದಿದ್ದು, ಜನರು ಕಾಮೆಂಟ್‌ಗಳ ವಿಭಾಗದಲ್ಲಿ ವಿದ್ಯಾರ್ಥಿಗಳ ಮೇಲೆ ತಮ್ಮ ಪ್ರೀತಿಯನ್ನು ಧಾರೆ ಎರೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...