Video | ಬೆರಗಾಗಿಸುವಂತಿದೆ ಭಿಕ್ಷೆ ಬೇಡುತ್ತಿದ್ದ ಹುಡುಗಿಯ ‘ಇಂಗ್ಲಿಷ್’ ಉಚ್ಚಾರಣೆ

ಶಾಲೆಗೆ ಹೋಗದೇ ಸರಾಗವಾಗಿ, ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಹುಡುಗಿಯ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಮತ್ತೊಮ್ಮರ ವೈರಲ್ ಆಗಿದ್ದು ಗಮನ ಸೆಳೆದಿದೆ. ಆಕೆಯ ಭಾಷಾ ಪ್ರಾವೀಣ್ಯತೆ ಗಮನಾರ್ಹವಾಗಿದೆ. ಭಾರತೀಯರಷ್ಟೇ ಅಲ್ಲದೆ ಇತರ ದೇಶಗಳ ಜನರ ಗಮನವನ್ನು ಸೆಳೆದಿದೆ. ಅನೇಕರು ಬಾಲಕಿಯ ಕೌಶಲ್ಯವನ್ನು ಶ್ಲಾಘಿಸಿದ್ದಾರೆ ಮತ್ತು ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ವೀಡಿಯೊದಲ್ಲಿ ಹುಡುಗಿ ಖ್ಯಾತ ನಟ ಅನುಪಮ್‌ ಖೇರ್‌ ಅವರು ಕೆಲ ವರ್ಷಗಳ ಹಿಂದೆ ನೇಪಾಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು. ಹುಡುಗಿ ಇಂಗ್ಲಿಷ್ ಮಾತನಾಡುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅನುಪಮ್‌ ಖೇರ್, ನೀನು ಯಾಕೆ ಭಿಕ್ಷೆ ಬೇಡುತ್ತಿದ್ದೀಯ ಎಂದು ಕೇಳುತ್ತಾರೆ. ತಾನು ಬಡ ಕುಟುಂಬದಿಂದ ಬಂದಿದ್ದು, ತನ್ನ ಕುಟುಂಬವನ್ನು ಪೋಷಿಸಲು ಹಣ ಬೇಡಬೇಕಾಗಿದೆ ಎಂದು ಬಾಲಕಿ ವಿವರಿಸುತ್ತಾಳೆ. ತನಗೆ ಶಾಲೆಗೆ ಹೋಗಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾಳೆ. ಆಕೆಯ ಪರಿಸ್ಥಿತಿಯಿಂದ ಭಾವುಕರಾದ ನಟ ಅನುಪಮ್‌ ಖೇರ್ “ನಾನು ನಿಮ್ಮನ್ನು ಶಾಲೆಗೆ ಕಳುಹಿಸಿದರೆ, ನೀವು ಹೋಗುತ್ತೀರಾ?” ಎಂದಾಗ ಹುಡುಗಿ ಆತ್ಮವಿಶ್ವಾಸದಿಂದ ಹೌದು, ನೀವು ನನ್ನನ್ನು ಕಳುಹಿಸಿದರೆ ನಾನು ಶಾಲೆಗೆ ಹೋಗುತ್ತೇನೆ ಎಂದು ಹೇಳಿದ್ದಾಳೆ.

ಾನುಪಮ್‌ ಖೇರ್ ಅವಳ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ತಮ್ಮ ಫೌಂಡೇಶನ್ ನಿನಗೆ ಸಹಾಯ ಮಾಡುತ್ತದೆ ಎಂದು ಹೇಳಿ ವಾಗ್ದಾನ ಮಾಡಿದ್ದರು. ಹುಡುಗಿಯ ಭಾಷಾ ಪ್ರಾವೀಣ್ಯತೆ ಮತ್ತು ನಟ ನೀಡಿದ ನೆರವಿಗೆ ನೆಟ್ಟಿಗರು ಮನಸೋತಿದ್ದಾರೆ. ಈ ಹಳೆ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಈಗ ಮತ್ತೆ ವೈರಲ್‌ ಆಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read