ಬ್ರಾಂಡೆಡ್ ಔಷಧಿಗಳ ಮೇಲೆ ಶೇಕಡ 20ರಷ್ಟು ರಿಯಾಯಿತಿ ಘೋಷಿಸಿದ ದೇಶದ ಮೊದಲ ಫಾರ್ಮಸಿ ಮಳಿಗೆ ಜಾಲ ಮೆಡ್ ಪ್ಲಸ್ ಮತ್ತೊಂದು ಗುರಿ ಹೊಂದಿದೆ. 4200 ಮಳಿಗೆಗಳ ಮೂಲಕ ಕಡಿಮೆ ದರದಲ್ಲಿ ಔಷಧ ತಲುಪಿಸುವ ಗುರಿಯೊಂದಿಗೆ ಸ್ಟೋರ್ ಜೆನೆರಿಕ್ ಪರಿಕಲ್ಪನೆ ಘೋಷಿಸಿದೆ.
600ಕ್ಕೂ ಅಧಿಕ ಪೇಟೆಂಟ್ ಅವಧಿ ಮುಕ್ತಾಯವಾದ ಔಷಧಿಗಳನ್ನು 4,200ಕ್ಕೂ ಅಧಿಕ ಮೆಡಿಕಲ್ ಸ್ಟೋರ್ ಗಳ ಮೂಲಕ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಕಾಂಟ್ರ್ಯಾಕ್ಟ್ ಡ್ರಗ್ ಮ್ಯಾನುಫ್ಯಾಕ್ಚರಿಂಗ್ ಆರ್ಗನೈಜೇಷನ್ ಜೊತೆಗೆ ಮೆಡ್ ಪ್ಲಸ್ ಸಹಯೋಗ ಹೊಂದಿದೆ. ಬಹುತೇಕ ಮಾತ್ರೆ, ಔಷಧ ಸಿರಪ್, ಆಂಟಿ ಬಯೋಟಿಕ್ ಗಳನ್ನು ಈ ಸಂಸ್ಥೆಗಳು ಉತ್ಪಾದಿಸಿ ಕೊಡಲಿದ್ದು, ಮಾರ್ಕೆಟಿಂಗ್ ಮತ್ತು ವಿತರಣಾ ವೆಚ್ಚ ಇಲ್ಲದ ಕಾರಣ ಮೆಡ್ ಪ್ಲಸ್ ಗೆ ಶೇಕಡ 50 ರಿಂದ 80ರಷ್ಟು ರಿಯಾಯಿತಿ ನೀಡಲು ಸಾಧ್ಯವಾಗುತ್ತದೆ.
ಸ್ಟೋರ್ ಜೆನೆರಿಕ್ ಮಳಿಗೆಗಳಲ್ಲಿ ಕಡಿಮೆ ದರದಲ್ಲಿ ಔಷಧ ತಲುಪಿಸಲಾಗುತ್ತಿದೆ. 7 ರಾಜ್ಯಗಳಲ್ಲಿ ಆರು ತಿಂಗಳಲ್ಲಿ 26.2 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ 139.7 ಕೋಟಿ ರೂ. ಗಿಂತ ಹೆಚ್ಚು ಹಣ ಉಳಿತಾಯವಾಗಿದೆ ಎನ್ನಲಾಗಿದೆ.