ವಿಧಾನ 1: ಮೊಬೈಲ್ ಬಳಸಿ ಮಾಹಿತಿಯನ್ನು ನಮೂದಿಸಿ (ಕೆಲವು ಬ್ಯಾಂಕ್‌ಗಳಲ್ಲಿ ನೆಟ್‌ಬ್ಯಾಂಕಿಂಗ್) ಅಥವಾ
ವಿಧಾನ 2: ATM ನಲ್ಲಿಯೇ ವಿವರಗಳನ್ನು ಭರ್ತಿ ಮಾಡಿ ಮತ್ತು ATM ನಲ್ಲಿ QR ಕೋಡ್ ಸ್ಕ್ಯಾನಿಂಗ್ ಸೌಲಭ್ಯವನ್ನು ಬಳಸಿಕೊಂಡು.
ಮೊದಲ ವಿಧಾನದಲ್ಲಿ, ನೀವು ಮೊಬೈಲ್ ಅಪ್ಲಿಕೇಶನ್ ಅಥವಾ ನೆಟ್ ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡಿ ನಿಮ್ಮ ಪಾಸ್‌ವರ್ಡ್‌ನ್ನು ಎಂಟ್ರಿ ಮಾಡಬೇಕು. ಸರ್ವಿಸ್ ಆಫ್ಶನ್ ಇರುವಲ್ಲಿ ಎಟಿಎಂ ಆಯ್ಕೆಯನ್ನು ಆಯ್ಕೆಮಾಡಿ ಮತ್ತು ‘ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ’ ವಹಿವಾಟನ್ನು ಆಯ್ಕೆಮಾಡಿ.
ಒಮ್ಮೆ ನೀವು ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ ಪೇಜ್‌ನಲ್ಲಿದ್ದರೆ, ನೀವು ಡ್ರಾ ಮಾಡಲು ಬಯಸುವ ಮೊತ್ತವನ್ನು ಎಂಟ್ರಿ ಮಾಡಿ. ಈ ಹಂತದಲ್ಲಿ ವಹಿವಾಟಿನ ಸಂಖ್ಯೆ ಜೊತೆ ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ತಾತ್ಕಾಲಿಕ ಪಿನ್ ಅನ್ನು ಬರುತ್ತೆ. ಇದಾದ ಬಳಿಕ ಎಟಿಎಂಗೆ ಹೋಗಿ ಮತ್ತು ‘ಕಾರ್ಡ್‌ಲೆಸ್ ವಿತ್‌ಡ್ರಾವಲ್’ ಅಥವಾ ‘ಕಾರ್ಡ್‌ಲೆಸ್ ಕ್ಯಾಶ್’ ಆಯ್ಕೆಯನ್ನು ಆರಿಸಿ. ಆಯ್ಕೆಯ ನಂತರ, ನೀವು ಹಿಂಪಡೆಯಲು ಬಯಸುವ ಮೊತ್ತದ ಜೊತೆಗೆ ಮೊಬೈಲ್ ಸಂಖ್ಯೆ, 9-ಅಂಕಿಯ ಉಲ್ಲೇಖ ಸಂಖ್ಯೆ ಮತ್ತು ತಾತ್ಕಾಲಿಕ ಪಿನ್ ಎಂಬ ನಾಲ್ಕು ವಿವರಗಳನ್ನು ನಿಮ್ಮ ಬಳಿ ಕೇಳುತ್ತೆ.
ನೀವು ATM ಕೇಂದ್ರದಲ್ಲಿದ್ದರೆ ಮತ್ತು ಕಾರ್ಡ್ ರಹಿತ ನಗದು ಹಿಂಪಡೆಯುವಿಕೆಯನ್ನು ಮಾಡಲು ಬಯಸಿದರೆ, ಕಾರ್ಡ್‌ಲೆಸ್ ವಿತ್ ಡ್ರಾವಲ್ ಆಯ್ಕೆ ಮಾಡಿ. ಮುಂದೆ, ಮೊತ್ತವನ್ನು ನಮೂದಿಸಿ ಮತ್ತು ನಿಮ್ಮ ಫೋನ್‌ನಲ್ಲಿ ನಿಮ್ಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ತೆರೆಯಿರಿ. ಎಟಿಎಂ ಸ್ಕ್ರೀನ್ ಮೇಲೆ ಕ್ಯೂಆರ್ ಕೋಡ್ ಕಾಣಿಸುತ್ತದೆ. ನಿಮ್ಮ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್‌ನಲ್ಲಿ BHIM/ UPI ಆಯ್ಕೆಯನ್ನು ಬಳಸಿಕೊಂಡು ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಿ. ಎಟಿಎಂನಿಂದ ಡ್ರಾ ಆದ ಹಣವನ್ನು ಪಡೆಯಿರಿ.
ಕಾರ್ಡ್‌ಲೆಸ್ ಕ್ಯಾಶ್ ವಿಥ್ ಡ್ರಾ ಮಾಡಲು ನೀವು ICICI ಬ್ಯಾಂಕ್ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದರೆ, ನೀವು ಅದೇ ಬ್ಯಾಂಕಿನ ATM ಅನ್ನು ಬಳಸಬೇಕಾಗುತ್ತದೆ. ಹೆಚ್ಚಿನ ಬ್ಯಾಂಕ್‌ಗಳಲ್ಲಿ ಇದೇ ರೀತಿ ಇದೆ. ಆದಾಗ್ಯೂ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸಿಟಿ ಯೂನಿಯನ್ ಬ್ಯಾಂಕ್ ಮತ್ತು ಕೆಲವು ಪಾವತಿ ವ್ಯಾಲೆಟ್‌ಗಳ ಸಂದರ್ಭದಲ್ಲಿ, ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ನಗದು ಹಿಂಪಡೆಯುವಿಕೆ (ICCW) ವಹಿವಾಟುಗಳನ್ನು ನಡೆಸುವ ಅವಕಾಶವಿದೆ.