ವಿಜಯಪುರ: ವಿಜಯಪುರ ಜಿಲ್ಲೆಯ ಆಲಮಟ್ಟಿ ಸಮೀಪ ಚಿಮ್ಮಲಗಿ ಭಾಗ-1ಎ ಗ್ರಾಮದ ಹನುಮಂತ ದೇವಾಲಯದ ಆವರಣದಲ್ಲಿ ಸ್ಥಾಪಿಸಲು ತಂದಿಡಲಾಗಿದ್ದ ದೇವರಮೂರ್ತಿಗಳನ್ನು ಯುವಕನೊಬ್ಬ ಹಾನಿಗೊಳಿಸಿದ್ದಾನೆ. ಆರೋಪಿಯನ್ನು ಆಲಮಟ್ಟಿ ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಅನ್ಯಕೋಮಿನ ಯುವಕ ಗೌಸ್ ಪಾಶ ಬಂದೇನವಾಜ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಹನುಮಂತ ದೇವಸ್ಥಾನ ಸಮಿತಿಯವರು ದೇವಾಲಯ ಆವರಣದಲ್ಲಿ ಪ್ರತಿಷ್ಠಾಪಿಸಲು ಶಿವನಮೂರ್ತಿ, ಬಸವಣ್ಣ ಮೂರ್ತಿ, ಗಣಪತಿ ಮೂರ್ತಿಗಳನ್ನು ತಂದಿಟ್ಟಿದ್ದರು. ಗ್ರಾಮದ ನಿವಾಸಿ ಗೌಸ್ ಪಾಶ ಕೊಠಡಿಯ ಬಾಗಿಲು ಮುರಿದು ಮೂರ್ತಿಗಳನ್ನು ಹಾನಿಗೊಳಿಸಿದ್ದಲ್ಲದೇ, ಅವುಗಳಿಗೆ ಸುತ್ತಿಟ್ಟಿದ್ದ ಬಟ್ಟೆಗೆ ಬೆಂಕಿ ಹಚ್ಚಿ ಸುಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.