alex Certify ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರೇ ಗಮನಿಸಿ : `ಗಳಿಕೆ ರಜೆ ನಗಧಿಕರಣ’ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರೇ ಗಮನಿಸಿ : `ಗಳಿಕೆ ರಜೆ ನಗಧಿಕರಣ’ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬೆಂಗಳೂರು : 2023 ನೇ ಸಾಲಿನ ಗಳಿಕೆ ರಜೆ ನಗದಿಕರಣ ಸೌಲಭ್ಯಕ್ಕಾಗಿ  ಸರಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು / ಶಿಕ್ಷಕರು – ಜಿ ಆರ್ ಸಿ ಸಿಬ್ಬಂದಿಯವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು,  ಗಳಿಕೆ ರಜೆ ನಗಧಿಕರಣ ಸೌಲಭ್ಯ ಪಡೆಯಲು ಇಚ್ಚೆ ಹೊಂದಿರುವ ಶಿಕ್ಷಕರು ಪ್ರತ್ಯೇಕ ಅರ್ಜಿಯ ಜೊತೆಗೆ ಕಡ್ಡಾಯವಾಗಿ ರಜೆ ಪ್ರ-ಪತ್ರ ನಮೂನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ಶಾಲಾ ಮುಖ್ಯ ಶಿಕ್ಷಕರಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಗಳಿಕೆ ರಜೆ ನಗದೀಕರಣ ಅವಧಿ ದಿ:16-10-2023 ರಿಂದ 30-10-2023 ರವರೆಗೆ ಗರಿಷ್ಠ 15 ದಿನಗಳಿಗೆ ಮಾತ್ರ ನಗದೀಕರಣ ಮಂಜೂರಿಸಲಾಗುವುದು ಮತ್ತು ಸ್ವೀಕೃತವಾಗುವ ಅರ್ಜಿಗಳನ್ನು ಕಡ್ಡಾಯವಾಗಿ ಸಕಾಲ ಸೇವೆಯಲ್ಲಿ ನೋಂದಾಯಿಸಬೇಕಾಗಿರುವ ಕಾರಣ ಶಿಕ್ಷಕರು ಪೂರ್ಣ ಹೆಸರು, ಮೊಬೈಲ್‌ ಸಂಖ್ಯೆ,  ಹಾಗೂ ಶಾಲೆಗಳ ಹೆಸರನ್ನು ಕಡ್ಡಾಯವಾಗಿ ನಮೂದಿಸುವುದು ಅವಶ್ಯವಾಗಿದೆ ಹಾಗೂ ಎಸ್‌.ಎಸ್‌.ಎ ಮತ್ತು ಟಿ.ಜಿ.ಟಿ ಶಿಕ್ಷಕರ ಅರ್ಜಿಗಳನ್ನು ಪ್ರತ್ಯೇಕವಾಗಿ ನಿಗಧಿಗೊಳಿಸಿದ ದಿನಾಂಕದೊಳಗಾಗಿ ಅರ್ಜಿಗಳನ್ನು ಸಲ್ಲಿಸಲು ಸೂಚಿಸಿದೆ.

ಪ್ರಯುಕ್ತ, ಎಲ್ಲಾ ಮುಖ್ಯ ಶಿಕ್ಷಕರು ಸದರ ವಿಷಯವನ್ನು ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಶಿಕ್ಷಕರ ಗಮನಕ್ಕೆ ತಂದು ಇಚ್ಚೆ ಹೊಂದಿರುವ ಶಿಕ್ಷಕರ ಅರ್ಜಿಗಳನ್ನು ಪಡೆದುಕೊಂಡು ಈ ಕೆಳಕಂಡ ನಮೂನೆಯೊಂದಿಗೆ ತಮ್ಮ ಶಿಫಾರಸು ಪತ್ರದ ಮುಖಾಂತರ ಸಂಬಂಧಪಟ್ಟ ಕಸ್ಟಂನ ವೇತನ: ಜಿಲ್ಲಾ ತಯಾರಿಸುವ ವಿಷಯ ನಿರ್ವಾಹಕರಿಗೆ ದಿನಾಂಕ : 10-11-2023 ರ ಕಚೇರಿ ಅವಧಿಯೊಳಗಾಗಿ ಮುದ್ದಾಗಿ ಸಲ್ಲಿಸಲು ಸೂಚಿಸಲಾಗಿದೆ. ತದನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...