ಬೆಂಗಳೂರು: ರಾಜ್ಯ ಶಿಕ್ಷಣ ನೀತಿ ಕರಡು ರೂಪಿಸಲು ಯುಜಿಸಿ ಮಾಜಿ ಅಧ್ಯಕ್ಷ ಪ್ರೊ.ಸುಖ್ ದೇವ್ ಥೋರಟ್ ಅಧ್ಯಕ್ಷತೆಯಲ್ಲಿ ರಚಿಸಿದ್ದ ರಾಜ್ಯ ಶಿಕ್ಷಣ ನೀತಿ ಆಯೋಗದ ಅವಧಿಯನ್ನು ಆಗಸ್ಟ್ ವರೆಗೆ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
11 ಸದಸ್ಯರನ್ನು ಒಳಗೊಂಡ ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ಕಳೆದ ಅ. 11ರಂದು ಸರ್ಕಾರ ರಚಿಸಿ ಆದೇಶಿಸಿತ್ತು. 2024ರ ಫೆಬ್ರವರಿ 28 ರೊಳಗೆ ವರದಿ ಸಲ್ಲಿಸಲು ಕಾಲಮಿತಿ ನಿಗದಿಪಡಿಸಲಾಗಿತ್ತು. ಆಯೋಗದ ವತಿಯಿಂದ ಪ್ರಥಮ ವರದಿ ಸಲ್ಲಿಸಲಾಗಿದೆ. ಮತ್ತಷ್ಟು ವಿಷಯಗಳ ಕುರಿತಾಗಿ ಅಧ್ಯಯನ, ಮಾಹಿತಿ ಸಂಗ್ರಹಕ್ಕೆ ಕಾಲಾವಕಾಶ ಕೇಳಿದ್ದರಿಂದ ಅವಧಿ ವಿಸ್ತರಿಸಲಾಗಿದೆ.