ಕೋವಿಡ್ ಬಳಿಕ ವರ್ಕ್ ಫ್ರಂ ಹೋಂ ಬಂದಾಗಿನಿಂದ ಉದ್ಯೋಗಿಗಳು ಯಾವ ಸ್ಥಿತಿಯಲ್ಲಿದ್ದರೂ ಆನ್ ಲೈನ್ ಮೀಟಿಂಗ್ ನಲ್ಲಿ ಭಾಗಿಯಾಗುವುದನ್ನ ಅಥವಾ ಕೆಲಸ ನಿರ್ವಹಿಸುವ ವಿಚಿತ್ರ ಮತ್ತು ವಿಶೇಷ ಸಂದರ್ಭಗಳನ್ನ ನೋಡಿರುತ್ತೀರಿ. ಇದೀಗ ಅಂತಹ ಮತ್ತೊಂದು ವಿಚಿತ್ರ ಸನ್ನಿವೇಶ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು ಪರ- ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ತನಯ್ ಪ್ರತಾಪ್ ಎಂಬ ಸ್ಟಾರ್ಟಪ್ ಸಂಸ್ಥಾಪಕ ಆನ್ ಲೈನ್ ಮೀಟಿಂಗ್ ಅಟೆಂಡ್ ಮಾಡುತ್ತಾ ಕ್ಷೌರ ಮಾಡಿಸಿಕೊಂಡಿದ್ದಾರೆ. ಅವರು ಟ್ವಿಟರ್‌ನಲ್ಲಿ ಅದೇ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಅದನ್ನು “ಗರಿಷ್ಠ ಉತ್ಪಾದಕತೆ” ಎಂದು ಲೇಬಲ್ ಮಾಡಿದ್ದಾರೆ. ಆದರೆ ಇಂಟರ್ನೆಟ್ ಬಳಕೆದಾರರು ಅವರನ್ನು ಟ್ರೋಲ್ ಮಾಡಿದ್ದಾರೆ.
ತನಯ್ ಪ್ರತಾಪ್ ಇನ್ವಾಕ್ಟ್ ಮೆಟಾವರ್ಸಿಟಿ ಎಂಬ ಸ್ಟಾರ್ಟಪ್‌ನ ಸ್ಥಾಪಕರು. ಟ್ವಿಟರ್‌ನಲ್ಲಿ ಅವರ ಬಯೋ ಪ್ರಕಾರ ಅವರು ಮೈಕ್ರೋಸಾಫ್ಟ್ ನ ಮಾಜಿ ಉದ್ಯೋಗಿ ಕೂಡ. ಜನವರಿ 4 ರಂದು, ಅವರು ಕ್ಷೌರ ಮಾಡಿಸಿಕೊಳ್ಳುವಾಗ ತಮ್ಮ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಶೀರ್ಷಿಕೆಯಲ್ಲಿ, ತಾನು ಸಲೂನ್‌ನಲ್ಲಿದ್ದಾಗ ಆನ್ ಲೈನ್ ಮೀಟಿಂಗ್ ನಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
“ಇಂದು ಪೀಕ್ ಪ್ರೊಡಕ್ಟಿವಿಟಿ ಅನ್ಲಾಕ್ ಆಗಿದೆ. ಕ್ಷೌರ ಮಾಡುವಾಗ ಸಭೆ ನಡೆಸಿದೆ. ನಾನು ಮೀಟಿಂಗ್ ತೆಗೆದುಕೊಳ್ಳುವಾಗ ಸಿಬ್ಬಂದಿ ಸಂಗೀತವನ್ನು ನಿಲ್ಲಿಸಿದರು. ಸ್ಟಾರ್ಟ್ ಅಪ್‌ಗಳು ಎಲ್ಲರಿಗೂ ಅಲ್ಲ. ನೀವು ಕೆಲಸ ಮಾಡದಿದ್ದಾಗ ನಿಮಗೆ ಸಿಗುವ ಸಮಯವೆಂದರೆ ನೀವು ಮಲಗಿರುವಾಗ ಮಾತ್ರ.ಎಂದು ಹೇಳಿದ್ದಾರೆ. ಇದಕ್ಕೆ ನೆಟ್ಟಿಗರು ಪರ- ವಿರೋಧವಾಗಿ ಅವರನ್ನು ಟ್ರೋಲ್ ಮಾಡಿದ್ದಾರೆ.
https://twitter.com/timyruhdwohc/status/1611207769692209154?ref_src=twsrc%5Etfw%7Ctwcamp%5Etweetembed%7Ctwterm%5E1611207769692209154%7Ctwgr%5E21346bd6ccfb4cec229ca459a353fb5dafce58b2%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fstartup-founder-attends-meeting-in-a-salon-while-getting-a-haircut-internet-trolls-him-2318117-2023-01-06