ದಾವಣಗೆರೆ: ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜು ಶಿವಗಂಗಾ ಒಬ್ಬ ಮೆಂಟಲ್ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ರಾಜಕೀಯ ಮಾಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಅವರನ್ನು ಬದಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಸವರಾಜು ಶಿವಗಂಗಾ ಪತ್ರ ಬರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಬಸವರಾಜು ಶಿವಗಂಗಾ ಒಬ್ಬ ಮೆಂಟಲ್. ಆತನ ಅಣ್ಣ ಶಿವಗಂಗಾ ಶ್ರೀನಿವಾಸನೇ ಮೊದಲು ರಾಜಕೀಯಕ್ಕೆ ಬಂದದ್ದು. ಅವನಿಂದಲೇ ಬೆಳೆದಿರುವ ಈತನಿಗೆ ಅವರ ಅಣ್ಣನಿಗೆ ಮೊದಲು ಗೌರವ ಕೊಡಲು ಹೇಳಿ, ಅವನ ಬಗ್ಗೆ ನಾನೇನು ಮಾತನಾಡಲಿ, ಅವನೊಬ್ಬ ಮೆಂಟಲ್ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.