ಮುಂಬೈ: ದೇಶಿಯ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ 1000 ಸಿಬ್ಬಂದಿ ವಜಾಗೊಳಿಸಲು ನಿರ್ಧರಿಸಿದೆ. ಭಾರಿ ನಷ್ಟದಲ್ಲಿರುವ ಸಂಸ್ಥೆ ಮುಂದಿನ ದಿನಗಳಲ್ಲಿ ನಷ್ಟ ಕಡಿಮೆ ಮಾಡಲು, ವೆಚ್ಚ ಉಳಿತಾಯ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲು ಮುಂದಾಗಿದೆ.
ಸ್ಪೈಸ್ ಜೆಟ್ ನಲ್ಲಿ ಒಟ್ಟು 9 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹಲವು ಸಮಸ್ಯೆಯ ಕಾರಣದಿಂದ ಕಾರ್ಯನಿರ್ವಹಿಸುತ್ತಿರುವ ವಿಮಾನಗಳ ಸಂಖ್ಯೆ ಕಡಿಮೆಯಾಗಿದ್ದು, ಶೇಕಡ 10 ರಿಂದ 15 ರಷ್ಟು ಸಿಬ್ಬಂದಿ ತೆಗೆದು ಹಾಕಲು ಸಂಸ್ಥೆ ನಿರ್ಧಸಿದೆ. ಸಿಬ್ಬಂದಿ ಕಡಿತದಿಂದ ಸ್ಪೈಸ್ ಹೆಟ್ ಗೆ ವಾರ್ಷಿಕ 100 ಕೋಟಿ ರೂ. ಉಳಿತಾಯವಾಗುತ್ತದೆ ಎನ್ನಲಾಗಿದೆ.