BIG NEWS : ಬಿಜೆಪಿ ದೂರಿಗೆ ಮುನ್ನವೇ ಅಲರ್ಟ್ ಆದ ಸ್ಪೀಕರ್ : ರಾಜ್ಯಪಾಲರಿಗೆ ಅಮಾನತು ವರದಿ ಸಲ್ಲಿಕೆ

ಬೆಂಗಳೂರು : ಬಿಜೆಪಿ ದೂರು ನೀಡುವ ಮುನ್ನವೇ ಸ್ಪೀಕರ್ ಯುಟಿ ಖಾದರ್ ಅಲರ್ಟ್ ಆಗಿದ್ದು, ರಾಜ್ಯಪಾಲರಿಗೆ 10 ಬಿಜೆಪಿ ಸದಸ್ಯರ ಅಮಾನತು ವರದಿ ಸಲ್ಲಿಕೆ ಮಾಡಿದ್ದಾರೆ.

ಬಿಜೆಪಿ ಸದಸ್ಯರ ಅಮಾನತು ವಿರೋಧಿಸಿ ಪ್ರತಿಭಟನೆ ನಡೆಸಿ ದೂರು ನೀಡಲು ಬಿಜೆಪಿ ಸಿದ್ದತೆ ನಡೆಸುತ್ತಿದ್ದಂತೆ ಅಲರ್ಟ್ ಆದ ಸ್ಪೀಕರ್ ಹಾಗೂ ಡೆಪ್ಯೂಟಿ ಸ್ಪೀಕರ್ ರಾಜ್ಯಪಾಲರಿಗೆ 10 ಬಿಜೆಪಿ ಸದಸ್ಯರ ಅಮಾನತು ವರದಿ ಸಲ್ಲಿಕೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಅಗೌರವ ತೋರಿದ 10 ಮಂದಿ ಬಿಜೆಪಿ ಶಾಸಕರಿಗೆ ವಿಧಾನಸಭೆ ಪ್ರವೇಶ ನಿರ್ಬಂಧಿಸಲಾಗಿದೆ. ವಿಧಾನಸಭೆಯಲ್ಲಿ ಅಸಭ್ಯ ವರ್ತನೆ, ಅಗೌರವ ತೋರಿದ 10 ಮಂದಿ ಬಿಜೆಪಿ ಶಾಸಕರನ್ನು ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿತ್ತು, ಸದನ ಮುಗಿಯುವವರೆಗೂ 10 ಮಂದಿ ಬಿಜೆಪಿ ಶಾಸಕರಿಗೆ ವಿಧಾನಸಭೆ ಪ್ರವೇಶ ನಿರ್ಬಂಧಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ, ಅಮಾನತಾದ 10 ಮಂದಿ ಶಾಸಕರ ಪಟ್ಟಿಗಳನ್ನು ಮಾರ್ಷಲ್ ಗೆ ನೀಡಲಾಗಿದೆ ಎಂಬುದು ತಿಳಿದು ಬಂದಿದೆ.

ಡಾ.ಸಿಎನ್ ಅಶ್ವತ್ಥನಾರಾಯಣ್, ಆರ್ ಅಶೋಕ್, ವೇದವ್ಯಾಸ ಕಾಮತ್, ಅರವಿಂದ್ ಬೆಲ್ಲದ್, ಅರಗ ಜ್ಞಾನೇಂದ್ರ , ವಿ.ಸುನೀಲ್ ಕುಮಾರ್, , ವೈ ಭರತ್ ಶೆಟ್ಟಿ , ಯಶಪಾಲ್ ಸುವರ್ಣ, ಮುನಿರಾಜ್, ಉಮರ್ ನಾಥ್ ಕೋಟ್ಯನ್ ಅವರನ್ನು ಸದನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read