ತಮ್ಮ ಬಟ್ಟೆಯ ಜೇಬಿನಲ್ಲಿ ಅಥವಾ ಹಳೆಯ ಬ್ಯಾಗ್‌ಗಳಲ್ಲಿ ದೀರ್ಘಕಾಲ ಮರೆತುಹೋಗಿರುವ ದುಡ್ಡನ್ನು ಕಂಡರೆ ಅದು ಸಂತೋಷದ ಕ್ಷಣವಾಗಿರುತ್ತದೆ. ಎಷ್ಟೇ ಸಣ್ಣ ಮೊತ್ತವಾಗಿದ್ದರೂ, ಅದು ಇನ್ನೂ ಹೆಚ್ಚಿನ ಸಂತೋಷವನ್ನು ತರುತ್ತದೆ.
ಸ್ಪೇನ್‌ನಲ್ಲಿರುವ ವ್ಯಕ್ತಿಯೊಬ್ಬರು ಹಾಲು ತುಂಬಿದ ಕ್ಯಾನ್‌ಗಳಲ್ಲಿ ತುಂಬಿದ £47,000 (ಅಂದಾಜು ರೂ 46.7 ಲಕ್ಷ) ಕಂಡು ಬೆಚ್ಚಿಬಿದ್ದರು ಆದರೆ ಅವರ ಸಂತೋಷ ಅಲ್ಪಕಾಲಿಕವಾಗಿತ್ತು.
ಟೊನೊ ಪಿನೈರೊ ಎಂಬ ಬಿಲ್ಡರ್ ಅವರು ನಿವೃತ್ತಿ ಹೊಂದಿದ ಸಮಯದಲ್ಲಿ ಮನೆಯನ್ನು ನವೀಕರಿಸುವಾಗ ಈ ಹಣ ಸಿಕ್ಕಿದೆ. ಕ್ಯಾನ್‌ನಲ್ಲಿ ಇವುಗಳನ್ನು ತುಂಬಿಸಿ ಇಡಲಾಗಿತ್ತು. ಇಷ್ಟು ಹಣ ಸಿಕ್ಕರೂ ಅವರಿಗೆ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಏಕೆಂದರೆ ಈ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂದು ಬ್ಯಾಂಕ್ ಹೇಳಿಬಿಟ್ಟಿತು!
20 ವರ್ಷಗಳ ಹಿಂದೆ 2002 ರಲ್ಲಿ ಈ ನೋಟ್ಗಳನ್ನು ದೇಶ ರದ್ದು ಮಾಡಿರುವ ಕಾರಣ, ಅವರಿಗೆ ಹಣ ಸಿಗಲಿಲ್ಲ. ಇದರಿಂದ ಟೊನೊ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಇನ್ನೇನಾದರೂ ಮಾಡಬಹುದೆ ಎಂದು ನೋಡುವುದಾಗಿ ಹೇಳಿದ್ದಾರೆ.