29 ವರ್ಷದ ಸ್ಪ್ಯಾನಿಶ್ ವ್ಯಕ್ತಿಯೊಬ್ಬ ಕಳೆದ ಎರಡು ವರ್ಷಗಳಿಂದ ಬೆತ್ತಲೆಯಾಗಿ ತಿರುಗುತ್ತಿದ್ದು, ಆತನಿಗೆ ಅಲ್ಲಿನ ಹೈಕೋರ್ಟ್ ಈಗ ಅನುಮತಿ ನೀಡಿದೆ. Alejandro colomar ಎಂಬ ಈತ 2020 ರಿಂದಲೂ ಮೈ ಮೇಲೆ ಒಂದು ಎಳೆ ಬಟ್ಟೆಯನ್ನೂ ಧರಿಸದೆ ಬೆತ್ತಲೆಯಾಗಿ ತಿರುಗುತ್ತಿದ್ದಾನೆ.
ಈತ ವೆಲೆನಿಕಾ ಪ್ರಾಂತ್ಯದ ಬೀದಿಗಳಲ್ಲಿ ಬೆತ್ತಲೆಯಾಗಿ ತಿರುಗುತ್ತಿದ್ದಾಗ ದಂಡ ವಿಧಿಸಿದ್ದರಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆತನ ಪರವಾಗಿ ತೀರ್ಪು ನೀಡಿದೆ.
ಸ್ಯಾನಿಶ್ ಕಾನೂನಿನ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಬೆತ್ತಲೆಯಾಗಿ ತಿರುಗುವುದು ಅಪರಾಧವೇನಲ್ಲ. ಇದನ್ನು ಕಾನೂನುಬದ್ಧಗೊಳಿಸಲಾಗಿದ್ದು, ಆದರೆ ಕೆಲವೊಂದು ಪ್ರಾಂತ್ಯಗಳಲ್ಲಿ ಬೀಚ್ ಮೊದಲಾದ ಸ್ಥಳದಲ್ಲಿ ನಿರ್ಬಂಧ ವಿಧಿಸಲಾಗಿದೆ.
2020 ರಿಂದಲೂ ಬೆತ್ತಲೆಯಾಗಿ ತಿರುಗುತ್ತಿರುವ Alejandro colomor ಗೆ ಈವರೆಗೆ ವಿರೋಧಕ್ಕಿಂತ ಪರವಾಗಿರುವವರೇ ಜಾಸ್ತಿ ಇದ್ದಾರಂತೆ. ಆದರೆ ಒಮ್ಮೆ ಮಾತ್ರ ಚಾಕು ತೋರಿಸಿ ಬೆದರಿಕೆ ಹಾಕಲಾಗಿತ್ತಂತೆ.