ಕೇಪ್ ಟೌನ್: ಬ್ರೆಡ್ ತರಲು ಹೋದ ಪುಟ್ಟ ಬಾಲಕಿಯೊಬ್ಬಳು ಬ್ರೆಡ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.
ಬಾಲಕಿಯ ಫೋಟೋ ದಕ್ಷಿಣ ಆಫ್ರಿಕಾದಂತಹ ಬ್ರೆಡ್ ಜಾಹೀರಾತು ಫಲಕಗಳಲ್ಲಿ ರಾರಾಜಿಸುತ್ತಿದೆ. ಈಕೆ ಬ್ರೆಡ್ ಖರೀದಿಸಿ ವಾಪಸ್ ಆಗುವ ವೇಳೆ ಶ್ವಾನೆ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ವಾಣಿಜ್ಯ ಛಾಯಾಗ್ರಾಹಕ ಲುಂಗಿಸಾನಿ ಮ್ಚಾಜಿ ಅವರು ಆಕೆಯ ಫೋಟೋ ಸೆರೆ ಹಿಡಿದಿದ್ದಾರೆ.
ಕೈಯಲ್ಲಿ ಬ್ರೆಡ್, ಮುಖದಲ್ಲಿ ಮುಗ್ಧ ನಗು ಕಂಡ ಛಾಯಾಗ್ರಾಹಕ ಮಗುವಿನ ಫೋಟೋ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ಭಾರಿ ವೈರಲ್ ಆಗಿದ್ದು, ಜನ ಆ ಬ್ರೆಡ್ ಕಂಪನಿಗೆ ಪತ್ರ ಬರೆದು ಬಾಲಕಿಯನ್ನು ರಾಯಭಾರಿಯಾಗಿ ಮಾಡಿ ಎಂದಿದ್ದಾರೆ. ಜನರ ಒತ್ತಾಸೆಗೆ ಮತ್ತು ಮಗುವಿನ ಮುಗ್ದತೆಗೆ ಮನಸೋತ ಕಂಪನಿ ಆಕೆಯನ್ನೇ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದೆ.
ಅಲ್ಲದೆ, ಕಡು ಬಡವರಾದ ಬಾಲಕಿಯ ಕುಟುಂಬದವರಿಗೆ ಎರಡು ರೂಂಗಳ ಮನೆಯನ್ನು ಬ್ರೆಡ್ ಕಂಪನಿ ಕಟ್ಟಿಸಿಕೊಟ್ಟಿದೆ. ಬಾಲಕಿಯ ಪದವಿವರೆಗಿನ ಶಿಕ್ಷಣದ ವೆಚ್ಚವನ್ನು ಭರಿಸುವುದಾಗಿ ಕಂಪನಿ ತಿಳಿಸಿದೆ. ಬ್ರೆಡ್ ಹಿಡಿದ ಆಕೆಯ ಫೋಟೋವನ್ನು ದಕ್ಷಿಣ ಆಫ್ರಿಕಾದಲ್ಲಿ ಜಾಹೀರಾತು ಮಾಡುವ ಹೋರ್ಡಿಂಗ್‌ಗಳಲ್ಲಿ ಹಾಕಲಾಗಿದೆ.