ವೆಸ್ಟ್ ಇಂಡೀಸ್ ಎದುರು ಜಯಭೇರಿಯಾಗುವ ಮೂಲಕ ಸೆಮಿ ಫೈನಲ್ ಗೆ ಎಂಟ್ರಿ ಕೊಟ್ಟ ದಕ್ಷಿಣ ಆಫ್ರಿಕಾ

ಇಂದು ನಡೆದ ಟಿ20 ವಿಶ್ವಕಪ್ನ 50ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಮೂರು ವಿಕೆಟ್ಗಳಿಂದ ಭರ್ಜರಿ ಜಯಸಾಧಿಸಿದೆ. ಈ ಪಂದ್ಯ 2 ತಂಡಕ್ಕೂ ತುಂಬಾ ಮುಖ್ಯವಾಗಿತ್ತು. ಮಳೆಯ ಆತಂಕದ ನಡುವೆಯೂ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವು ಸಿಕ್ಕಿದೆ. ತನ್ನ ತವರಿನಲ್ಲಿ ವಿಶ್ವ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದ ವೆಸ್ಟ್ ಇಂಡೀಸ್ ನ ಕನಸು ನುಚ್ಚುನೂರಾಗಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡ ಸೆಮಿ ಫೈನಲ್ ಗೆ ಪ್ರವೇಶ ಪಡೆದಿವೆ.

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ರೋಸ್ಟನ್ ಚೇಸ್ ಅವರ ಅರ್ಧಶತಕದ ಸಹಾಯದಿಂದ ವೆಸ್ಟ್ ಇಂಡೀಸ್ ತಂಡ 135 ರನ್ ದಾಖಲಿಸಿತು. ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಮಾಡುವ ಸಮಯದಲ್ಲಿ ಮಳೆ ಅಡ್ಡಿಯಾದ ಕಾರಣ dls ಪ್ರಕಾರ 17 ಓವರ್‌ಗಳಲ್ಲಿ 123 ರನ್ ಗಳಿಸಬೇಕೆಂಬ ಗುರಿ ನೀಡಲಾಯಿತು. ದಕ್ಷಿಣ ಆಫ್ರಿಕಾ ತಂಡ 7 ವಿಕೆಟ್ಗಳನ್ನು ಕಳೆದುಕೊಂಡರು ಛಲ ಬಿಡದೆ ಈ ಪಂದ್ಯದಲ್ಲಿ ಜಯಬೇರಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read