VIRAL | ಶೂ ಕದ್ದ ಸ್ವಿಗ್ಗಿ ಡೆಲಿವರಿ ಬಾಯ್; ಕ್ರಮ ಕೈಗೊಳ್ಳದೆ ‘ಮಾನವೀಯತೆ’ ಮೆರೆಯಿರಿ ಎಂದ ನಟ ಸೋನು ಸೂದ್

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಸೋನು ಸೂದ್ ಯಾರಿಗೆ ಗೊತ್ತಿಲ್ಲ ಹೇಳಿ. ಕೋವಿಡ್ ಸಂಕಷ್ಟದ ಸಮಯದಲ್ಲಿ ಸೋನು ಮಾಡಿರುವ ಕಾರ್ಯ ಯಾರೂ ಸಹ ಮರೆಯಲಾಗದಂತದ್ದು. ಕಷ್ಟದಲ್ಲಿದ್ದವರಿಗೆ ಎಲ್ಲ ರೀತಿಯಲ್ಲೂ ನೆರವಾಗಿದ್ದ ಸೋನು, ಈಗಲೂ ಸಹ ತಮ್ಮ ಮಾನವೀಯ ಕಾರ್ಯಗಳನ್ನು ಮುಂದುವರೆಸಿದ್ದಾರೆ.

ಸೋನು ಸೂದ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಾಕಿರುವ ಪೋಸ್ಟ್ ಒಂದು ಈಗ ಬಾರಿ ಚರ್ಚೆಗೆ ಕಾರಣವಾಗಿದೆ. ಗುರುಗ್ರಾಮದಲ್ಲಿ ಇತ್ತೀಚೆಗೆ ಸ್ವಿಗ್ಗಿ ಡೆಲಿವರಿ ಬಾಯ್, ಗ್ರಾಹಕರೊಬ್ಬರ ಮನೆಗೆ ಡೆಲಿವರಿಗೆ ಹೋದಾಗ ಶೂ ಕದ್ದಿದ್ದು, ಇದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸೋನು ಸೂದ್, ಸ್ವಿಗ್ಗಿ ಡೆಲಿವರಿ ಬಾಯ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬೇಡಿ. ಆತನಿಗೆ ಅದು ಅವಶ್ಯಕತೆ ಇದ್ದ ಕಾರಣ ತೆಗೆದುಕೊಂಡಿರಬಹುದು. ಹೀಗಾಗಿ ಮಾನವೀಯತೆ ಮೆರೆಯಿರಿ ಎಂದು ಹೇಳಿದ್ದಾರೆ. ಇದಕ್ಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಪರ – ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಒಂದು ವರ್ಗ ಸೋನು ಸೂದ್ ನಿಲುವನ್ನು ಬೆಂಬಲಿಸಿ ಪರ ವಹಿಸಿಕೊಂಡಿದ್ದರೆ, ಮತ್ತೊಂದಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಸೋನು ಸೂದ್ ಅಭಿಪ್ರಾಯ ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸುತ್ತಿರುವವರು ಹೇಳುತ್ತಿದ್ದು, ಕಳ್ಳತನ ಸಮರ್ಥಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಭಾರತದಲ್ಲಿ ಕೋಟ್ಯಾಂತರ ಸ್ವಿಗ್ಗಿ ಡೆಲಿವರಿ ಬಾಯ್ ಗಿಂತ ಕಡು ಬಡತನದಲ್ಲಿದ್ದು, ಕಷ್ಟಪಟ್ಟು ದುಡಿದು ತಿನ್ನುತ್ತಿಲ್ಲವೇ ಎಂದಿದ್ದಾರೆ. ಸೋನು ಸೂದ್ ನಿಲುವಿಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ.

https://twitter.com/SonuSood/status/1778819186544054559?ref_src=twsrc%5Etfw%7Ctwcamp%5Etweetembed%7Ctwterm%5E1778819186544054559%7Ctwgr%5Efe07815e5c089fde0e76e2a2108cbef94304f1bc%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatv-epaper-dh3b7fa321d59346eab3b41c6232c9d4b6%2Fsonusooddefendsswiggydeliveryboywhostolecustomersshoessaysbuyhimanewpairof-newsid-n599845652

https://twitter.com/Vijay34516868/status/1778828415115698600?ref_src=twsrc%5Etfw%7Ctwcamp%5Etweetembed%7Ctwterm%5E1778828415115698600%7Ctwgr%5Efe07815e5c089fde0e76e2a2108cbef94304f1bc%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatv-epaper-dh3b7fa321d59346eab3b41c6232c9d4b6%2Fsonusooddefendsswiggydeliveryboywhostolecustomersshoessaysbuyhimanewpairof-newsid-n599845652

https://twitter.com/vyangesh/status/1778836310280876416?ref_src=twsrc%5Etfw%7Ctwcamp%5Etweetembed%7Ctwterm%5E1778836310

https://twitter.com/ArnazHathiram/status/1778978471869652993?ref_src=twsrc%5Etfw%7Ctwcamp%5Etweetembed%7Ctwterm%5E1778978471869652993%7Ctwgr%5Efe07815e5c089fde0e76e2a2108cbef94304f1bc%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatv-epaper-dh3b7fa321d59346eab3b41c6232c9d4b6%2Fsonusooddefendsswiggydeliveryboywhostolecustomersshoessaysbuyhimanewpairof-newsid-n599845652

https://twitter.com/vivek_naskar/status/1778854265995636862?ref_src=twsrc%5Etfw%7Ctwcamp%5Etweetembed%7Ctwterm%5E1778854265995636862%7Ctwgr%5Efe07815e5c089fde0e76e2a2108cbef94304f1bc%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Findiatv-epaper-dh3b7fa321d59346eab3b41c6232c9d4b6%2Fsonusooddefendsswiggydeliveryboywhostolecustomersshoessaysbuyhimanewpairof-newsid-n599845652

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read