ಬ್ರಾ ಧರಿಸುವ ಅಭ್ಯಾಸ ಯಾವಾಗಿನಿಂದ ಪ್ರಾರಂಭವಾಯ್ತು ಎಂಬುದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ಭಿನ್ನ ಭಿನ್ನ ಅಭಿಪ್ರಾಯಗಳಿವೆ. ಈಗ ಮಹಿಳೆಯರ ವಾರ್ಡ್ರೋಬ್ ನಲ್ಲಿ ಬ್ರಾ ಇದ್ದೇ ಇರುತ್ತದೆ. ಇದು ಮಹಿಳೆಯರ ಅನಿವಾರ್ಯಗಳಲ್ಲಿ ಒಂದಾಗಿದೆ. ಬ್ರಾ ಧರಿಸುವುದ್ರಿಂದ ಅನೇಕ ಲಾಭಗಳಿವೆ. ಹಾಗೆ ಬ್ರಾ ಧರಿಸದೆ ಇರೋದ್ರಿಂದಲೂ ಅನೇಕ ಲಾಭಗಳಿವೆ.
ಬ್ರಾ ಧರಿಸದೆ ಇರುವುದ್ರಿಂದ ನಿಮ್ಮ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಬ್ರಾ ಬಿಗಿಯಾಗಿರುವ ಕಾರಣ ಸ್ತನದ ಅಂಗಾಂಶಗಳು ಬಿಗಿಯಾಗಿರುತ್ತವೆ. ಬ್ರಾ ಧರಿಸದಿರುವ ವೇಳೆ ರಕ್ತ ಸಂಚಾರ ಸುಲಭವಾಗುತ್ತದೆ.
ಬ್ರಾ ಧರಿಸದೆ ಇದ್ದಾಗ ರಕ್ತ ಸಂಚಾರ ಸುಲಭವಾಗುವ ಕಾರಣ ಸ್ತನ ಆರೋಗ್ಯವಾಗಿರುತ್ತದೆ. ಈ ಭಾಗದ ಚರ್ಮ ಆರೋಗ್ಯವಾಗಿರುತ್ತದೆ. ರಕ್ತ ಪರಿಚಲನೆ ದೇಹದಾದ್ಯಂತ ಸರಾಗವಾಗಿ ಚಲಿಸುತ್ತದೆ.
ರಾತ್ರಿ ಮಲಗುವ ವೇಳೆ ಅನೇಕ ಮಹಿಳೆಯರು ಬ್ರಾ ಧರಿಸಿ ಮಲಗುತ್ತಾರೆ. ಆದ್ರೆ ರಾತ್ರಿ ಮಲಗುವಾಗ ಬ್ರಾ ಧರಿಸಬಾರದು. ಇದು ಮುಟ್ಟಿನ ಮೇಲೂ ಪರಿಣಾಮ ಬೀರುತ್ತದೆ. ಹಾಗೆ ಬ್ರಾ ಧರಿಸದೆ ಮಲಗುವುದ್ರಿಂದ ಉತ್ತಮ ನಿದ್ರೆ ಪಡೆಯಬಹುದು.