ನವದೆಹಲಿ: 2023ನೇ ವರ್ಷದ ಮೊದಲ ಸೂರ್ಯ ಗ್ರಹಣ ಇಂದು ಬೆಳಗ್ಗೆ ಸಂಭವಿಸಲಿದೆ. ಭಾರತದಲ್ಲಿ ಗ್ರಹಣ ಗೋಚರವಾಗುವುದಿಲ್ಲ.
ಅಪರೂಪವಾದ ಹೈಬ್ರಿಡ್ ಸೂರ್ಯಗ್ರಹಣವಾದ ಕಾರಣ ಖಗೋಳಶಾಸ್ತ್ರಜ್ಞರು ಆಸಕ್ತಿಯಿಂದ ಗ್ರಹಣ ಎದುರು ನೋಡುತ್ತಿದ್ದಾರೆ. ಗುರುವಾರ ಬೆಳಗ್ಗೆ 7 ಗಂಟೆ 4 ನಿಮಿಷಕ್ಕೆ ಆರಂಭವಾಗಿ ಮಧ್ಯಾಹ್ನ 12.29ಕ್ಕೆ ಗ್ರಹಣ ಕೊನೆಗೊಳ್ಳಲಿದೆ. ಒಟ್ಟು 5 ಗಂಟೆ 24 ನಿಮಿಷಗಳ ಕಾಲ ಗ್ರಹಣ ಇರಲಿದ್ದು, ಆಸ್ಟ್ರೇಲಿಯಾ, ಪೆಸಿಫಿಕ್ ಸಾಗರ, ಅಂಟಾರ್ಟಿಕಾ ಮತ್ತು ಹಿಂದೂ ಮಹಾಸಾಗರ ಭಾಗದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.
ಈ ವರ್ಷ ನಾಲ್ಕು ಗ್ರಹಣಗಳಿಗೆ ಸಾಕ್ಷಿಯಾಗಲಿದ್ದು, ಅವುಗಳಲ್ಲಿ ಎರಡು ಸೂರ್ಯಗ್ರಹಣಗಳಾಗಿವೆ. ಅಪರೂಪದ ಹೈಬ್ರಿಡ್ ಸೂರ್ಯ ಗ್ರಹಣ ಎಂದೂ ಕರೆಯಲ್ಪಡುವ ಸೂರ್ಯಗ್ರಹಣವು ಅತ್ಯಂತ ಮಹತ್ವದ ಆಕಾಶ ಘಟನೆಗಳಲ್ಲಿ ಒಂದಾಗಿದೆ. ಗ್ರಹಣವು ಚಂದ್ರನಿಂದ ಸೂರ್ಯನನ್ನು ನಿರ್ಬಂಧಿಸುವ ಒಂದು ವಿದ್ಯಮಾನವಾಗಿದೆ, ಅಂದರೆ ಸೂರ್ಯಗ್ರಹಣ, ಮತ್ತು ಚಂದ್ರಗ್ರಹಣದಲ್ಲಿ ಭೂಮಿಯ ನೆರಳು ಚಂದ್ರನನ್ನು ಮರೆಮಾಡುತ್ತದೆ. 2023 ರ ಮೊದಲ ಸೂರ್ಯಗ್ರಹಣವು ಏಪ್ರಿಲ್ 20 ರಂದು ಸಂಭವಿಸುತ್ತದೆ.