ಉತ್ತರ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ವಿಪರೀತ ಚಳಿಯ ಪರಿಸ್ಥಿತಿ ತಲೆದೋರಿದ್ದು, ಕೆಲವೆಡೆಗಳಲ್ಲಿ ಪರಿಸ್ಥಿತಿ ಭಯಾನಕವಾಗಿದೆ. ಹಲವು ಕಡೆಗಳಲ್ಲಿ ಹಿಮಪಾತವಾಗುತ್ತಿದೆ.
ಹಿಮಪಾತ ಹೆಚ್ಚಾದ ಹಿನ್ನೆಲೆಯಲ್ಲಿ ಶ್ರೀನಗರ ವಿಮಾನ ನಿಲ್ದಾಣದಿಂದ ಎಲ್ಲಾ ವಿಮಾನಗಳನ್ನು ರದ್ದು ಮಾಡಲಾಗಿದೆ. ಕಾಶ್ಮೀರ ಕಣಿವೆಯು ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ಭಾರೀ ಹಿಮಪಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಸ್ಥಗಿತಗೊಂಡಿದೆ. ಮುಂದಿನ 12 ಗಂಟೆಗಳಲ್ಲಿ ಪ್ರತಿಕೂಲ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಅದರ ಪರಿಸ್ಥಿತಿಯನ್ನು ಬಿಂಬಿಸುವ ವಿಡಿಯೋ ಇದೀಗ ವೈರಲ್ ಆಗಿದೆ. ಹಿಮಪಾತದಿಂದ ಉಂಟಾಗುತ್ತಿರುವ ತೊಂದರೆ ಏನು, ಅದರ ಭಯಾನಕತೆ ಏನು ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಇದನ್ನು ನೋಡಿದ ಎಷ್ಟೋ ನೆಟ್ಟಿಗರು ತಾವು ಎಷ್ಟು ಸುರಕ್ಷಿತವಾದ ಜಾಗದಲ್ಲಿ ಇದ್ದೇವೆ ಎನ್ನುವುದನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ. ತಾವೇ ಎಷ್ಟೋ ಅದೃಷ್ಟವಂತರು. ಇಂಥ ವಿಡಿಯೋ ನೋಡಿದಾಗ ಅಲ್ಲಿಯ ಜನರು ಹೇಗೆಲ್ಲಾ ಪರಿಸ್ಥಿತಿ ಅನುಭವಿಸುತ್ತಿರಬಹುದು ಎಂಬುದನ್ನು ನೆನೆಸಿಕೊಂಡರೆ ಭಯವಾಗುತ್ತದೆ ಎಂದಿದ್ದಾರೆ.
https://twitter.com/hasjan121/status/1619905098284670976?ref_src=twsrc%5Etfw%7Ctwcamp%5Etweetembed%7Ctwterm%5E1619905098284670976%7Ctwgr%5Ebb6ad0649e5e4d7744b8edd8b14f8064ee2d5bed%7Ctwcon%5Es1_&ref_url=https%3A%2F%2Fwww.news18.com%2Fbuzz%2Fsnowfall-trends-on-twitter-as-people-share-pics-and-videos-of-snow-clad-mountains-6952597.html