ಬೆಂಗಳೂರು: ಶಕ್ತಿ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಚಿತ ಟಿಕೆಟ್ ನೀಡುವ ಬದಲು ಟ್ಯಾಪ್ ಅಂಡ್ ಟ್ರಾವೆಲ್ ತಂತ್ರಜ್ಞಾನದ ಕಾರ್ಡ್ ನೀಡುವ ಕುರಿತು ಚಿಂತನೆ ನಡೆದಿದೆ.
ಮೆಟ್ರೋ ರೀತಿಯಲ್ಲಿ ಟ್ಯಾಪ್ ಅಂಡ್ ಟ್ರಾವೆಲ್ ಸ್ಮಾರ್ಟ್ ಕಾರ್ಡ್ ಗಳನ್ನು ಮಹಿಳೆಯರಿಗೆ ನೀಡಲಾಗುತ್ತದೆ. ಬಸ್ ಹತ್ತುವಾಗ ಮತ್ತು ಇಳಿಯುವಾಗ ಯಂತ್ರಕ್ಕೆ ಕಾರ್ಡ್ ತೋರಿಸಬೇಕು. ಕಂಡಕ್ಟರ್ ಗಳಿಗೆ ಕಿರಿಕಿರಿ ತಪ್ಪಿಸಲು ಈ ರೀತಿಯ ಕಾರ್ಡ್ ನೀಡುವ ಚಿಂತನೆ ನಡೆದಿದೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಈ ಮೊದಲು ಹೇಳಿದಂತೆ ಮಾಮೂಲಿ ಸ್ಮಾರ್ಟ್ ಕಾರ್ಡ್ ಗಳನ್ನು ನೀಡಲಾಗುವುದು. ಆಗಸ್ಟ್ ಮಧ್ಯಭಾಗ ಅಥವಾ ಆಗಸ್ಟ್ ಅಂತ್ಯದ ವೇಳೆಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ನಂತರ ಮೆಟ್ರೋ ರೈಲು ಸೇವೆಯಲ್ಲಿ ಬಳಸುವ ಮಾದರಿಯ ಕಾರ್ಡ್ ಗಳನ್ನು ಮಹಿಳೆಯರಿಗೆ ನೀಡುವ ಕುರಿತು ಚರ್ಚೆ ನಡೆದಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಪ್ರತಿ ಮಹಿಳೆಯರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತಿತರ ದಾಖಲೆಗಳನ್ನು ಕಂಡಕ್ಟರ್ ಪರಿಶೀಲಿಸಿ ಉಚಿತ ಟಿಕೆಟ್ ಕೊಡಬೇಕು. ಇದಕ್ಕೆ ಸಾಕಷ್ಟು ಸಮಯ ಆಗುವುದರಿಂದ ಮೆಟ್ರೋ ಕಾರ್ಟ್ ರೀತಿಯ ಟ್ಯಾಪ್ ಅಂಡ್ ಟ್ರಾವೆಲ್ ಕಾರ್ಡ್ ವಿತರಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.