
ಮಂಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ವೃದ್ಧ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನ ಕದ್ರಿ ಕಂಬಳ ಪ್ರದೇಶದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಚಂದ್ರಿಕಾ ಬಡಾವಣೆಯಲ್ಲಿ ವಾಸವಿದ್ದ ಲತಾ ಭಂಡಾರಿ(70), ಸುಂದರಿ ಶೆಟ್ಟಿ(80) ನೇಣಿಗೆ ಶರಣಾಗಿದ್ದಾರೆ. ಲತಾ ಭಂಡಾರಿ ಅವರ ಪತಿ ಜಗನ್ನಾಥ ಭಂಡಾರಿ ಕೆಲಸಕ್ಕೆ ತರಲಿದ್ದ ವೇಳೆ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಗನ್ನಾಥ ಭಂಡಾರಿ ಮನೆಗೆ ಹಿಂತಿರುಗಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕದ್ರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.